×
Ad

ಮಲ್ಪೆ-ಪಡುಕೆರೆ: ನರ್ಮ್ ಬಸ್ ಸಂಚಾರಕ್ಕೆ ಚಾಲನೆ

Update: 2017-05-01 11:59 IST

ಉಡುಪಿ, ಮೇ 1: ಮಲ್ಪೆಯಿಂದ ಪಡುಕೆರೆ ನಡುವೆ ಸಂಚರಿಸಲಿರುವ 3 ನರ್ಮ್ ಬಸ್ ಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಚಾಲನೆ ನೀಡಿದರು.

ಸೇತುವೆ ಇಲ್ಲದ ಕಾರಣ ಪಡುಕೆರೆಗೆ ಹಲವು ದಶಕಗಳಿಂದ ಬಸ್ ಸಂಚಾರ ವ್ಯವಸ್ಥೆ ಸಾಧ್ಯವಾಗಿರಲಿಲ್ಲ. ಇದೀಗ ಸೇತುವೆ ನಿರ್ಮಾಣವಾದ ನಂತರ ನರ್ಮ್ ಬಸ್ ಗಳಿಗೆ ಚಾಲನೆ ನೀಡಲಾಗಿದೆ.

ಈ ಸಂದರ್ಭ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ ತಿಲಕ್ ರಾಜ್, ಸದಸ್ಯರಾದ ನಾರಾಯಣ ಕುಂದರ್, ಸತೀಶ್ ಅಮೀನ್ ಪಡುಕೆರೆ, ಕೇಶವ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News