×
Ad

ಈ ರೈಲಿನಲ್ಲಿ ತಾರಾಸೌಕರ್ಯ!

Update: 2017-05-01 13:45 IST

ಹೊಸದಿಲ್ಲಿ,ಮೇ1: ಮುಂಬೈ-ಗೋವಾ ಮಾರ್ಗದಲ್ಲಿ ಸಂಚರಿಸುವ ಅದ್ದೂರಿ ರೈಲುಸಂಚಾರಕ್ಕೆ ರೈಲ್ವೆ ಇಲಾಖೆ ಸಿದ್ಧವಾಗಿದೆ. ಪ್ರಸಿದ್ಧ ಅಡುಗೆ ಭಟ್ಟರು ತಯಾರಿಸಿದ ಆಹಾರ, ಪ್ರತಿಯೊಬ್ಬ ಪ್ರಯಾಣಿಕನಿಗೆ ಎಲ್‌ಸಿಡಿ ಸ್ಕ್ರೀನ್, ಕಾಫಿ ವೈಂಡಿಗ್ ಮಿಶನ್,ಅಟೊಮ್ಯಾಟಿಕ್ ಡೋರ್ ಮುಂತಾದ ಸೌಲಭ್ಯಗಳನ್ನು ಹೊಂದಿದ ತೇಜಸ್ ರೈಲು ಜೂನ್‌ನಿಂದ ಪ್ರಯಾಣ ಆರಂಭಿಸಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

  ಭಾರತದಲ್ಲಿ ಇಂತಹ ರೈಲು ಇದೇ ಮೊದಲನೇ ಬಾರಿ ಒಡಾಟ ಆರಂಭಿಸಲಿದೆ. ಆಧುನಿಕ ಸೌಕರ್ಯಗಳುಳ್ಳ ರೈಲಿನಲ್ಲಿ ವೈಫೈ ವ್ಯವಸ್ಥೆಯೂ ಇದೆ. ಬಯೊವ್ಯಾಕ್ಯುಂ ಟಾಯ್ಲೆಟ್‌ಗಳು, ಕೈಒಣಗಿಸುವ ವ್ಯವಸ್ಥೆ ಹೀಗಲ್ಲಾ ಅದ್ದೂರಿ ಸೌಕರ್ಯಗಳನ್ನು ರೈಲ್ವೆ ಇಲಾಖೆ ಈ ರೈಲಿನಲ್ಲಿ ಒದಗಿಸಲಿದೆ. ಇದರಲ್ಲಿ ಲಾಭವಾದರೆ ಮುಂದಿನ ಹಂತದಲ್ಲಿ ದಿಲ್ಲಿ-ಚಂಡಿಗಡದ ನಡುವೆ ಇಂತಹ ಅದ್ದೂರಿ ರೈಲು ಓಡಾಟ ಆರಂಭಿಸಲಾಗುವುದು.

ರೈಲಿನೊಳಗೆ ಪ್ರಯಾಣಿಕರ ನೆಚ್ಚಿನ ತಿಂಡಿತಿನಿಸು, ಪ್ರಸಿದ್ಧ ಚೆಫ್‌ಗಳ ನೇತೃತ್ವದಲ್ಲಿ ತಯಾರಿಸಿ ಲಭ್ಯಗೊಳಿಸಲಾಗುತ್ತದೆ. ಈ ರೀತಿ ಪ್ರಯಾಣಿಕರಿಗೆಅಂತಾರಾಷ್ಟ್ರೀಯ ಗುಣಮಟ್ಟದ ಸೇವೆ ನೀಡಲು ಇಲಾಖೆ ಸಜ್ಜಾಗಿದೆ.

ಉನ್ನತ ಶ್ರೇಣಿ, ಚೇರ್‌ಕಾರ್‌ಗಳು ಇರುವ ಬೋಗಿಯಲ್ಲಿ ಅಗ್ನಿನಿರೋಧಕ ವ್ಯವಸ್ಥೆ ಸಹಿತ 22ಆಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗುತ್ತದೆ. ಒಟ್ಟಿನಲ್ಲಿ ಪ್ರಯಾಣಿಕರು ಗರಿಷ್ಠ ಸುಖದ ಪ್ರಯಾಣ ನಡೆಸಬೇಕೆನ್ನುವುದು ನಮ್ಮ ಉದ್ದೇಶ ಎಂದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News