4.41 ಕೋಟಿ ರೂ. ಅಮಾನ್ಯ ನೋಟುಗಳೊಂದಿಗೆ 8 ಮಂದಿ ಬಂಧನ
Update: 2017-05-01 14:53 IST
ಹೈದರಾಬಾದ್, ಮೇ 1: ಹೈದರಾಬಾದ್‌ನ ಬಂಜಾರ ಹಿಲ್ಸ್‌ನಲ್ಲಿ 4.41 ಕೋಟಿ ರೂಪಾಯಿ ಹಳೆ ನೋಟುಗಳೊಂದಿಗೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೊಸ ನೋಟಿಗೆ ಬದಲಾಯಿಸುವ ವೇಳೆ ತಂಡ ಪೊಲೀಸರ ಬಲೆಗೆ ಬಿದ್ದಿದೆ.
ಕಮಿಶನ್‌ಗೆ ನೋಟು ಬದಲಾಯಿಸಿಕೊಡುವ ತಂಡ ಇದು ಎಂದು ಪೊಲೀಸರು ತಿಳಿಸಿದ್ದಾರೆ. ಬಂಜಾರ ಹಿಲ್ಸ್ ಪೊಲೀಸರು ಕೇಸು ದಾಖಲಿಸಿತನಿಖೆ ನಡೆಸುತ್ತಿದ್ದಾರೆ.
ಮಾರ್ಚ್ 13ರ ಬಳಿಕ ಬಂಜಾರ ಹಿಲ್ಸ್ ಮತ್ತು ಪರಿಸರ ಪ್ರದೇಶಗಳಲ್ಲಿ ಈವರೆಗೆ 40 ಮಂದಿ ಅಮಾನ್ಯಗೊಳಿಸಲಾದ ಹಳೆಯ ನೋಟು ಬದಲಾಯಿಸುವ ವೇಳೆ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ. ಇವರಿಂದ ಸುಮಾರು ಒಂಬತ್ತು ಕೋಟಿಗಿಂತಲೂ ಹೆಚ್ಚು ಅಮಾನ್ಯ ನೋಟುಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದರು.