ಮೊಣಕಾಲು ಕಾಣುವ ಉಡುಪು ಧರಿಸಿದ 12ರ ಹರೆಯದ ಬಾಲಕಿ ಚೆಸ್ ಟೂರ್ನ್ ಮೆಂಟ್‌ನಿಂದ ಹೊರಕ್ಕೆ!

Update: 2017-05-01 10:12 GMT

ಕೌಲಾಲಂಪುರ,ಮೇ 1: ಮೊಣಕಾಲು ಕಾಣುವ ಉಡುಪು ತೊಟ್ಟು ಬಂದ ಹನ್ನೆರಡುವರ್ಷದ ಬಾಲಕಿಯನ್ನು ಮಲೇಶ್ಯನ್ ನ್ಯಾಶನಲ್ ಸ್ಕಾಲಸ್ಟಿಕ್ ಚೆಸ್ ಚಾಂಪಿಯನ್ ಶಿಪ್‌ನಿಂದ ಹೊರಹಾಕಲಾಗಿದೆ. ಈ ಕುರಿತು ಬಾಲಕಿಯ ಕೋಚ್ ಕೌಶಲ್ ಖಂದಾರ್ ದೂರಿದ್ದಾರೆ. ಎಪ್ರಿಲ್ 14ರಿಂದ 16ರವರೆಗೆ ನಡೆದ ಚೆಸ್ ಟೂರ್ನ್ ಮೆಂಟ್‌ನಲ್ಲಿ ಮಲೇಶ್ಯದ ಬಾಲಕಿಯನ್ನು ಹೊರಗಿಡಲಾಗಿದೆ ಎಂದುಕೌಶಲ್ ತನ್ನ ಫೇಸ್ ಬುಕ್‌ನಲ್ಲಿ ಆರೋಪಿಸಿದ್ದಾರೆ.

ಹಲವು ಕಡೆಗಳಲ್ಲಿ ಡ್ರೆಸ್ ಕೋಡ್ ಇರುತ್ತದೆ. ಸಂಘಟನೆಗಳು ಅದನ್ನು ಮೊದಲೇ ತಿಳಿಸುತ್ತಿದ್ದರು. ಆದರೆ ಮಲೇಶ್ಯನ್‌ಟೂರ್ನ್‌ಮೆಂಟ್‌ನಲ್ಲಿ ಪ್ರಥಮ ಸುತ್ತು ಪೂರ್ತಿಯಾಗಿ ಎರಡನೆ ಸುತ್ತು ಅರ್ಧವಾದಾಗ ಬಾಲಕಿಯನ್ನು ಉಡುಪಿನ ಹೆಸರಿನಲ್ಲಿ ಆಟದಿಂದ ನಿಷೇಧಿಸಲಾಯಿತು. ಹಲವು ಮುಸ್ಲಿಂ ಬಹುಸಂಖ್ಯಾತ ದೇಶಗಳು ಟೂರ್ನ್‌ಮೆಂಟ್ ನಡೆಯುವಾಗ ಶಿರವಸ್ತ್ರಧರಿಸಬೇಕೆಂದು ಆಗ್ರಹಿಸುತ್ತವೆ. ಮಲೇಶ್ಯದಲ್ಲಿ ಈವರೆಗೆ ಬಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಸೃಷ್ಟಿಯಾಗಿರಲಿಲ್ಲ ಎಂದು ಕೌಶಲ್ ಹೇಳಿದ್ದಾರೆ.

  ಬಾಲಕಿಗೆ ಬೇರೆ ಬಟ್ಟೆ ಧರಿಸಿ ಟೂರ್ನಮೆಂಟ್‌ನಲ್ಲಿ ಮುಂದುವರಿಯಬಹುದು ಎಂದು ಆಯೋಜಕರು ಹೇಳಿದರು.ಆದರೆ ಇದು ಅಂಗಡಿಗಳೆಲ್ಲ ಮುಚ್ಚಿದ ಮೇಲೆ ರಾತ್ರಿ ಹತ್ತು ಗಂಟೆ ನಂತರ ನಮಗೆ ತಿಳಿಸಲಾಯಿತು. ಮರುದಿವಸ ಎಂಟು ಗಂಟೆಗೆ ಸ್ಪರ್ಧೆ ಅರಂಭಗೊಂಡಿದ್ದರಿಂದಹೊಸ ಬಟ್ಟೆ ಖರೀದಿಸಿ ಭಾಗವಹಿಸಲು ಸಾಧ್ಯವಾಗಿಲ್ಲ. ಹೀಗೆ ಬಾಲಕಿ ಟೂರ್ನ್‌ಮೆಂಟ್‌ನಿಂದ ಹೊರಗಾಗಿದ್ದಾಳೆ ಎಂದು ಕೌಶಲ್ ಹೇಳಿದ್ದಾರೆ. ಹಣ ಮತ್ತು ಸಮಯ ವ್ಯಯಿಸಿದ್ದನ್ನು ಬಿಟ್ಟು ಬೇರೆ ಏನೂ ಪ್ರಯೋಜನ ಆಗಿಲ್ಲ ಎಂದು ಬಾಲಕಿಯ ತಾಯಿ ದೂರಿದ್ದಾರೆ.

ಆಯೋಜಕರು ಡ್ರೆಸ್ ಕೋಡ್‌ನ ವಿಚಾರವನ್ನು ಮೊದಲೇ ತಿಳಿಸಿರಲಿಲ್ಲ. ತನ್ನ ಮಗಳು ತುಂಬ ನೊಂದುಕೊಂಡಿದ್ದಾಳೆ ಎಂದು ಅವರು ಹೇಳಿದ್ದಾರೆ. ಘಟನೆಯ ಕುರಿತು ತನಿಖೆ ನಡೆಸುತ್ತಿದ್ದೇವೆ. ಕೋಚ್ ಮತ್ತು ಬಾಲಕಿಯ ಅಮ್ಮ ನೀಡಿದ ಹೇಳಿಕೆ ವೈರುಧ್ಯದಿಂದ ಕೂಡಿದೆ ಎಂದುಆಯೋಜಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News