ಇರಾನ್ ಜೆಂ ಮಾಧ್ಯಮ ಕಂಪೆನಿ ಮಾಲಕ ಇಸ್ಥಾಂಬುಲ್ ನಲ್ಲಿ ಗುಂಡಿಗೆ ಬಲಿ

Update: 2017-05-01 11:00 GMT

 ಟೆಹ್ರಾನ್, ಮೇ. 1: ಪರ್ಶಿಯನ್ ಭಾಷೆಯ ಜೆಂಟೆಲಿವಿಷನ್ ಕಂಪೆನಿಯ ಸಂಸ್ಥಾಪಕ ಸಈದ್ ಕರೀಮಿ(45) ಇಸ್ತಾಂಬುಲ್ ನಲ್ಲಿ ಗುಂಡೇಟಿಗೆ ಬಲಿಯಾಗಿದ್ದಾರೆ. ಕುವೈಟ್‌ನ ಬಿಸಿನೆಸ್‌ಪಾಲುದಾರನೊಂದಿಗೆ ಪ್ರಯಾಣಿಸುತ್ತಿದ್ದಾಗ ಅವರನ್ನು ಗುಂಡಿಟ್ಟು ದುಷ್ಕರ್ಮಿಗಳು ಕೊಂದಿದ್ದಾರೆ.

ನಂತರ ಇವರು ಪ್ರಯಾಣಿಸಿದ್ದ ಕಾರು ಹೊತ್ತಿ ಉರಿದಸ್ಥಿತಿಯಲ್ಲಿ ಪತ್ತೆಯಾಗಿದೆ. ಮುಖವಾಡ ಧರಿಸಿದ ದುಷ್ಕರ್ಮಿಗಳು ಗುಂಡುಹಾರಿಸಿದ್ದಾರೆ. ಅವರು ಮತ್ತು ಅವರ ಗೆಳೆಯ ಕೂಡಾ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ದೃಢೀಕರಿಸಿದ್ದಾರೆ. ಈ ಹಿಂದೆ ಇರಾನ್ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಆರುವರ್ಷ ಇವರಿಗೆ ಜೈಲುಶಿಕ್ಷೆವಿಧಿಸಲಾಗಿತ್ತು.

ಮಧ್ಯಪ್ರಾಚ್ಯದ ಕಾರ್ಯಕ್ರಮಗಳನ್ನು ಜೆಂ ಟಿವಿ ಪ್ರಸಾರ ಮಾಡುತ್ತದೆ. ಈ ಕಾರ್ಯಕ್ರಮಗಳು ಇಸ್ಲಾಮಿಗೆ ವಿರೋಧವಾಗಿದ್ದವು ಎಂದು ಅಧಿಕಾರಿಗಳು ಹೇಳಿದ್ದರು. ಪಾಶ್ಚಾತ್ಯ ಸಂಸ್ಕೃತಿ ಪ್ರಸಾರಕ್ಕೆ ಇವರು ತನ್ನ ಚ್ಯಾನೆಲ್‌ನ್ನುಬಳಸುತ್ತಿದ್ದಾರೆ ಎಂದು ಇರಾನ್ ಆರೋಪಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News