ಉಪ್ಪಿನಂಗಡಿಯಲ್ಲಿ ಏಕದಿನ ಧಾರ್ಮಿಕ ಪ್ರವಚನ
ಉಪ್ಪಿನಂಗಡಿ, ಮೇ 1: ಯಾರು ತನ್ನ ಕುಟುಂಬದ ಸದಸ್ಯರೊಂದಿಗೆ ಒಳ್ಳೆಯ ಬಾಂಧವ್ಯದಿಂದಿದ್ದು, ಕಷ್ಟ-ಸುಖಗಳಲ್ಲಿ ಭಾಗಿಯಾಗುತ್ತಾನೋ ಅಂತಹ ವ್ಯಕ್ತಿ ಅಲ್ಲಾಹುವಿಗೆ ಉತ್ತಮನಾಗುತ್ತಾನೆ ಎಂದು ಖ್ಯಾತ ಮತಪಂಡಿತ, ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮಾ ತಿರುವನಂತಪುರಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಎಂ. ನೌಶಾದ್ ಬಾಖವಿ ಹೇಳಿದರು
ಉಪ್ಪಿನಂಗಡಿ ಮಾಲಿಕ್‌ದೀನಾರ್ ಜುಮಾ ಮಸೀದಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಏಕದಿನ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹುತೇಕ ಎಲ್ಲಾ ಧರ್ಮಗಳು ಪತ್ನಿಯನ್ನು ಪ್ರೀತಿಸು ಎಂದು ಹೇಳುತ್ತದೆ, ಆದರೆ ಇಸ್ಲಾಂ ಪತ್ನಿಗೆ ವಿಶೇಷವಾದ ಸ್ಥಾನಮಾನ ಕಲ್ಪಿಸಿದೆ. ಇಸ್ಲಾಂ ಆಕೆಯನ್ನು ಗೌರವಿಸು ಎಂದು ಹೇಳುತ್ತದೆ. ಆದರೆ ಇಂದಿನ ಪುರುಷ ಸಮಾಜದ ಬಹುತೇಕ ಮಂದಿ ಪತ್ನಿ ಎಂದರೆ ತನ್ನ ಸೇವಕಿ ಎಂದು ನಂಬಿದ್ದಾರೆ. ಇದು ಅಲ್ಲಾಹು ಮೆಚ್ಚುವಂತದ್ದಲ್ಲ ಎಂದರು.
ಆತೂರು ಬದ್ರಿಯಾ ಜುಮಾ ಮಸೀದಿ ಖತೀಬ್ ಸೈಯದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ದುಆ ನೆರವೇರಿಸಿದರು
ಮಾಲಿಕ್‌ದೀನಾರ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಸ್ತಪಾ ಕೆಂಪಿ ಅಧ್ಯಕ್ಷತೆ ವಹಿಸಿದ್ದರು. ಮಾಲಿಕ್‌ದೀನಾರ್ ಜುಮಾ ಮಸೀದಿ ಖತೀಬ್ ಅಬ್ದುಲ್ ಸಲಾಂ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.
ಸಮಾರಂಭದಲ್ಲಿ ಪುತ್ತೂರು ಸಂಯುಕ್ತ ಜಮಾಅತ್ ಅಧ್ಯಕ್ಷ ಇಬ್ರಾಹಿಂ ಹಾಜಿ ಕಮ್ಮಾಡಿ, ದಾರಿಮೀಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಹಾಜಿ ಎಸ್.ಬಿ. ಮುಹಮ್ಮದ್ ದಾರಿಮಿ, ಉಪ್ಪಿನಂಗಡಿ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಹಾಜಿ ಅಬ್ದುಲ್ ರಹಿಮಾನ್ ಕೊಳ್ಳೇಜಾಲ್, ಕಲ್ಲೇಗ ಮಸೀದಿ ಅದ್ಯಕ್ಷ ಶುಕೂರ್ ಹಾಜಿ, ಕರಾಯ ಮಸೀದಿ ಅಧ್ಯಕ್ಷ ಹಾಜಿ ಅಶ್ರಫ್, ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ವಲಯ ಸಮಿತಿ ಅಧ್ಯಕ್ಷ ಅಶ್ರಫ್ ಕೊಳ್ಳೇಜಾಲ್, ಕಡಬ ವಲಯ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಗ್ರಾಪಂ ಸದಸ್ಯ ಯು.ಟಿ. ತೌಸೀಫ್, ಬಜತ್ತೂರು ಗ್ರಾಪಂ ಸದಸ್ಯ ನಝೀರ್ ಬೆದ್ರೋಡಿ, ಕೋಲ್ಪೆ ಅಬ್ದುಲ್ಲ ಕಡವಿನಬಾಗಿಲು ಮದ್ರಸ ಸಮಿತಿ ಅಧ್ಯಕ್ಷ ಮುಹಮ್ಮದ್ ಹಾಜಿ, ಪೆರಿಯಡ್ಕ ಮಸೀದಿ ಅಧ್ಯಕ್ಷ ಬಶೀರ್ ನಿರ್ಮಾ, ನೆಕ್ಕಿಲಾಡಿ ಮಸೀದಿ ಅಧ್ಯಕ್ಷ ಮಹಮ್ಮದ್ ಹಾಜಿ, ಕುಪ್ಪೆಟ್ಟಿ ಮಸೀದಿ ಉಪಾಧ್ಯಕ್ಷ ಅಬ್ಬಾಸ್ ಪಿಲಿಗೂಡು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪ್ಪಿನಂಗಡಿ ಹಿಪ್‌ಳುಲ್ ಕಾಲೇಜು ಪ್ರಿನ್ಸಿಪಾಲ್ ಹಾಫಿಲ್ ಮಹಮ್ಮದ್ ತ್ವಹಿಬ್ ಅಲ್‌ಖಾಸಿಮಿ ಕಿರಾಅತ್ ಪಠಿಸಿದರು.
ಖಜಾಂಚಿ ಮಹಮ್ಮದ್ ಮುಸ್ತಪಾ, ಸಮಿತಿ ಸದಸ್ಯರಾದ ಅಬ್ದುಲ್ ಹಮೀದ್ ಕರಾವಳಿ, ಯು.ಟಿ. ರವೂಫ್, ಮುಹಮ್ಮದ್ ಕೂಟೇಲು, ಹನೀಫ್ ಕಡವಿನಬಾಗಿಲು, ಇಸ್ಮಾಯಿಲ್ ಮೋನು ಕೆಂಪಿ, ಉಬಾರ್ ಡೋನರ್ಸ್ ಅಧ್ಯಕ್ಷ ಶಬ್ಬೀರ್ ಕೆಂಪಿ ಸಹಕರಿಸಿದರು.
ಸ್ವಾಗತ ಸಮಿತಿಯ ಅಧ್ಯಕ್ಷ ಹಾಜಿ ಹಾರೂನ್ ರಶೀದ್ ಅಗ್ನಾಡಿ ಸ್ವಾಗತಿಸಿ, ಪಿ.ಎ. ಮರ್ಧಾಳ ಕಾರ್ಯಕ್ರಮ ನಿರೂಪಿಸಿದರು. ಮಸೀದಿ ಕಾರ್ಯದರ್ಶಿ ಅಬ್ದುಲ್ ಶುಕೂರ್ ಶುಕ್ರಿಯಾ ವಂದಿಸಿದರು.