​ಮೇ 5: ರೆಂಜಲಾಡಿ ಪುನರ್‌ ನಿರ್ಮಾಣಗೊಂಡ ಮಸೀದಿ ಉದ್ಘಾಟನೆ

Update: 2017-05-01 16:28 GMT

ಪುತ್ತೂರು, ಮೇ 1: ಸರ್ವೆ ಗ್ರಾಮದ ರೆಂಜಲಾಡಿಯಲ್ಲಿ ಪುನರ್‌ ನಿರ್ಮಾಣಗೊಂಡಿರುವ ಬದ್ರಿಯಾ ಜುಮಾ ಮಸೀದಿಯ ಉದ್ಘಾಟನಾ ಸಮಾರಂಭವು ಮೇ 5ರಂದು ನಡೆಯಲಿದೆ ಎಂದು ರೆಂಜಲಾಡಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಕೆ.ಆರ್ ಹುಸೈನ್ ದಾರಿಮಿ ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮಜ್ಲಿಸುನ್ನೂರ್, ಸೌಹಾರ್ದ ಸಂಗಮ ಮತ್ತು ಧಾರ್ಮಿಕ ಪ್ರವಚನ ನಡೆಯಲಿದೆ. ಉದ್ಘಾಟನಾ ಸಮಾರಂಭದ ಪ್ರಯುಕ್ತ ಪೂವಾಹ್ನ ದ್ವಜಾರೋಹಣವನ್ನು ಮಸೀದಿ ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷ ವಿ.ಎಚ್. ಅಬ್ದುಲ್ ಶಕೂರ್ ಹಾಜಿ ನೆರವೇರಿಸಲಿದ್ದಾರೆ. ಅಸ್ಸೈಯದ್ ಸ್ವಾಬಿಕಲಿ ಶಿಹಾಬ್ ತಂಙಳ್ ಪಾಣಕಾಡ್ ಮಸೀದಿಯನ್ನು ಉದ್ಘಾಟಿಸಲಿದ್ದಾರೆ. ವಕ್ಫ್ ನಿರ್ವಹಣೆಯನ್ನು ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷ ಶೈಖುನಾ ಅಬ್ದುಲ್ ಜಬ್ಬಾರ್ ಉಸ್ತಾದ್ ಮಿತ್ತಬೈಲ್ ನಿರ್ವಹಿಸಲಿದ್ದು, ಜುಮಾ ಖುತುಬಾವನ್ನು ಮೂಡಿಗೆರೆ ಖಾಝಿ ಶೈಖುನಾ ಎಂ.ಎ ಖಾಸಿಂ ಮುಸ್ಲಿಯಾರ್ ತಾಯಲಂಗಾಡಿ ಮಾಡಲಿದ್ದಾರೆ. ಜುಮಾ ನಮಾರ್ ನೇತೃತ್ವವನ್ನು ದ.ಕ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್ ನೀಡಲಿದ್ದಾರೆ.

ಅಪರಾಹ್ನ ನಡೆಯುವ ಸೌಹಾರ್ದ ಸಂಗಮ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ತಾಲೂಕು ಸಂಯುಕ್ತ ಜಮಾಅತ್ ಅಧ್ಯಕ್ಷ ಹಾಜಿ ಎಸ್ ಇಬ್ರಾಹಿಂ ಕಮ್ಮಾಡಿ ವಹಿಸಲಿದ್ದಾರೆ. ಹಾಜಿ ಮುಸ್ತಫಾ ಕೆಂಪಿ ಉದ್ಘಾಟಿಸಲಿದ್ದು ರೆಂಜಲಾಡಿ ಮಸೀದಿ ಅಧ್ಯಕ್ಷ ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಕುಂಬ್ರ ಕೆಐಸಿಯ ಪ್ರೊ. ಅನೀಸ್ ಕೌಸರಿ ಹಾಗೂ ಸವಣೂರು ಸ.ಪ.ಪೂ.ಕಾಲೇಜಿನ ಪ್ರಾಂಶುಪಾಲ ಬಿ.ವಿ ಸೂರ್ಯನಾರಾಯಣ ಎಲಿಯ ಸೌಹಾರ್ದ ಸಂದೇಶ ಭಾಷಣ ಮಾಡಲಿದ್ದಾರೆ.

ಮಗ್ರಿಬ್ ನಮಾಜಿನ ಬಳಿಕ ಕುಂಬ್ರ ಕೆಐಸಿ ವಿದ್ಯಾರ್ಥಿಗಳಿಂದ ಮಜ್ಲಿಸುನ್ನೂರು ನಡೆಯಲಿದೆ. ಬಳಿಕ ಖಲೀಲ್ ಹುದವಿ ಕೇರಳ ಮತಪ್ರಬಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಸೀದಿ ಪುನರ್‌ನಿರ್ಮಾಣ ಸಮಿತಿ ಅಧ್ಯಕ್ಷ ವಿ.ಎಚ್ ಅಬ್ದುಲ್ ಶಕೂರ್ ಹಾಜಿ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ ಹನೀಫ್ ರೆಂಜಲಾಡಿ, ಮಸೀದಿಯ ಕಾರ್ಯದರ್ಶಿ ಅಬ್ದುರ್ರಹೀಂ ರೆಂಜಲಾಡಿ, ಪುನರ್‌ನಿರ್ಮಾಣ ಸಮಿತಿಯ ಕೋಶಾಧಿಕಾರಿ ಬಿ.ಕೆ ಅಬ್ದುಲ್ ರಹ್ಮಾನ್ ಹಾಜಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News