ಮರ ಉರುಳಿ ಬಿದ್ದು ಆಟೋ ರಿಕ್ಷಾ ಜಖಂ
Update: 2017-05-01 22:03 IST
ಪುತ್ತೂರು, ಮೇ 1: ಸೋಮವಾರ ಬೀಸಿದ ಭಾರೀ ಗಾಳಿಗೆ ಆಟೋ ರಿಕ್ಷಾವೊಂದಕ್ಕೆ ಮರವೊಂದು ಉರುಳಿ ಬಿದ್ದ ಪರಿಣಾಮ ರಿಕ್ಷಾ ಸಂಪೂರ್ಣ ಜಖಂಗೊಂಡ ಘಟನೆ ಸೋಮವಾರ ಸಂಜೆ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಕೊಲ್ಲಾಗೆ ಎಂಬಲ್ಲಿ ನಡೆದಿದೆ.
ಕೊಲ್ಲಾಜೆ ಸಮೀಪದ ಕೊಂಬರಡ್ಕ ಎಂಬಲ್ಲಿ ಮೋನಪ್ಪ ಪೂಜಾರಿ ಎಂಬವರ ಮನೆಯ ಪಕ್ಕದಲ್ಲಿ ಈ ಘಟನೆ ನಡೆದಿದೆ. ಕರ್ಕೆರ ಕುಟುಂಬಸ್ಥರ ತರವಾಡು ಮನೆ ಇದಾಗಿದ್ದು, ಸೋಮವಾರ ಇಲ್ಲಿ ದೈವಗಳ ವಾರ್ಷಿಕ ಪರ್ವ ನಡೆಯುತ್ತಿತ್ತು. ಈ ಕಾರ್ಯಕ್ರಮಕ್ಕೆಂದು ಬಂದಿದ್ದ ವಸಂತ ಅವರು ತಮ್ಮ ಆಟೋ ರಿಕ್ಷಾವನ್ನು ಮನೆ ಸಮೀಪ ನಿಲ್ಲಿಸಿದ್ದರು. ಸಂಜೆ ಹೊತ್ತಿಗೆ ಇದ್ದಕ್ಕಿದ್ದಂತೆ ಭಾರೀ ಗಾಳಿ ಬೀಸಿದ್ದು, ರಿಕ್ಷಾದ ಪಕ್ಕದಲ್ಲಿದ್ದ ಉಪ್ಪಳಿಗೆ ಜಾತಿಗೆ ಸೇರಿದ ಮರ ಬೇರು ಸಹಿತ ಕಿತ್ತು ರಿಕ್ಷಾದ ಮೇಲೆ ಬಿದ್ದಿತ್ತು. ಇದರಿಂದಾಗಿ ಆಟೋ ರಿಕ್ಷಾ ಪೂರ್ತಿ ಜಖಂಗೊಂಡಿದೆ. ಈ ಸಂದರ್ಭ ಅಲ್ಲೇ ಆಸುಪಾಸಿನಲ್ಲಿ ಮಕ್ಕಳು, ಕುಟುಂಬಸ್ಥರೆಲ್ಲ ಇದ್ದರೂ ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.