ಮೇ 3ರಿಂದ ಸುರಿಬೈಲು ದಾರುಲ್ ಅಶ್-ಅರಿಯ ಹನೀಫಿ ಸನದುದಾನ ಸಮ್ಮೇಳನ
ಮಂಜೇಶ್ವರ, ಮೇ 2: ಸುರಿಬೈಲು ದಾರುಲ್ ಅಶ್-ಅರಿಯ ಹನೀಫಿ ಸನದುದಾನ ಸಮ್ಮೇಳನ ಮೇ 3ರಿಂದ 5ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆಯೆಂದು ಪದಾಧಿಕಾರಿಗಳು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
3ರಂದು ಬೆಳಗ್ಗೆ ದ್ವಜಾರೋಹಣ ನಡೆಯಲಿದೆ. 4ರಂದು ಖತ್‌ಮುಲ್ ಬುಖಾರಿ , ಉಲಮಾ ಸಂಗಮ , ಮಹಿಳಾ ತರಗತಿ, ಆತ್ಮೀಯ ಸಂಗಮ ನಡೆಯಲಿದೆ. ಮೇ 5 ರಂದು ಅಪರಾಹ್ನ 3 ಗಂಟೆಗೆ ಹನೀಫಿ ಸಂಗಮ, ಸಂಜೆ 6 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಆಲಿಕುಂಞಿ ಉಸ್ತಾದ್ ಶಿರಿಯ ದುಆಗೆ ನೇತೃತ್ವ ನೀಡುವರು. ಮಹ್ಮೂಮುದುಲ್ ಫೈಝಿ ಓಲೆಮಂಡೂವು ಅಧ್ಯಕ್ಷತೆ ವಹಿಸುವರು.
ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಉದ್ಘಾಟಿಸುವರು. ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರಾ ಸನದು ಪ್ರದಾನ ಮಾಡುವರು. ಪಿ.ಎ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಜುನೈದಿ ಸನದುದಾನ ಭಾಷಣ ಮಾಡುವರು.
ಎ.ಪಿ ಅಬೂಬಕ್ಕರ್ ಮುಸ್ಲಿಯಾರ್ , ಎ.ಪಿ ಮುಹಮ್ಮದ್ ಮುಸ್ಲಿಯಾರ್ , ಪೇರೋಡು ಅಬ್ದುರ್ರಹ್ಮಾನ್ ಸಖಾಫಿ ಭಾಷಣ ಮಾಡುವರು. ಅಬ್ಬಾಸ್ ಮುಸ್ಲಿಯಾರ್ ಮಂಜನಾಡಿ, ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಪಸ್ತಿತರುರುವರು. ಅಬ್ದುರ್ರಶೀದ್ ಝೈನಿ ಪ್ರಾಸ್ತಾವಿಕ ಭಾಷಣ ಮಾಡುವರು ಎಂದು ಪದಾಧಿಕಾರಿಗಳು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಿ.ಎಚ್. ಮುಹಮ್ಮದಲಿ ಸಖಾಫಿ , ಅಬ್ದುಲ್ ರಶೀದ್ ಹನೀಫಿ ,ಹಾರಿಸ್ ಹನೀಫಿ ಮೊದಲಾದವರು ಉಪಸ್ಥಿತರಿದ್ದರು.