ಕಾರ್ತಿಕ್‌ರಾಜ್ ಮನೆಗೆ ಗೃಹಸಚಿವ ಪರಮೇಶ್ವರ್ ಭೇಟಿ
Update: 2017-05-02 16:02 IST
ಕೊಣಾಜೆ, ಮೇ 2: ಸ್ವಂತ ಸಹೋದರಿಯ ಕುಮ್ಮಕ್ಕಿನಿಂದ ಕೊಲೆಗೀಡಾದ ಕಾರ್ತಿಕ್‌ರಾಜ್ ಅವರ ಮನೆಗೆ ಗೃಹಸಚಿವ ಪರಮೇಶ್ವರ್ ಮಂಗಳವಾರ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪಜೀರು ಗ್ರಾಪಂ ಅಧ್ಯಕ್ಷ ಸೀತಾರಾಮ ಶಟ್ಟಿ, ಉಮ್ಮರ್ ಪಜೀರು ಮೊದಲಾದವರು ಉಪಸ್ಥಿತರಿದ್ದರು