ಭ್ರಷ್ಟ ವ್ಯವಸ್ಥೆಯಿಂದ ಯೋಧರ ಸಾವು: ಕರ್ನಲ್ ರಾಮಚಂದ್ರರಾವ್
Update: 2017-05-02 21:25 IST
ಉಡುಪಿ, ಮೇ 2: ನಮ್ಮ ಇಂದಿನ ಭ್ರಷ್ಟ ವ್ಯವಸ್ಥೆಯಿಂದಾಗಿ ಗಡಿಯಲ್ಲಿ ಸಾಕಷ್ಟು ಸಂಖ್ಯೆಯ ಯೋಧರು ಸಾಯುತ್ತಿದ್ದಾರೆ ಎಂದು ನಿವೃತ್ತ ಯೋಧ ಕರ್ನಲ್ ರಾಮಚಂದ್ರ ರಾವ್ ವಿಷಾದ ವ್ಯಕ್ತಪಡಿಸಿದ್ದಾರೆ.
ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಮಂಗಳವಾರ ನಗರದ ಮಾರುತಿ ವಿಥಿಕಾದಲ್ಲಿ ಹಮ್ಮಿಕೊಳ್ಳಲಾದ ಹುತಾತ್ಮ ಯೋಧರಾದ ಪರಮ ಜೀತ್ ಸಿಂಗ್ ಮತ್ತು ಪ್ರೇಮ್ ಸಾಗರ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ನೇತ್ರತಜ್ಞ ಡಾ.ಕೃಷ್ಣ ಪ್ರಸಾದ್, ನಿವೃತ್ತ ಯೋಧರಾದ ಗಣೇಶ್ ರಾವ್, ರಘುಪತಿ ರಾವ್, ಗಣಪಯ್ಯ, ಸಾಧು ಕುಂದರ್, ಕೃಷ್ಣ ಆಚಾರ್ಯ, ದಯಾನಂದ್ ಪೂಜಾರಿ, ಕೆ.ಮಾರುತಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು, ಫ್ರೆಡ್ ಜ್ವಾಶ್, ವಿನಯಚಂದ್ರ, ತಾರ ನಾಥ್ ಮೇಸ್ತ, ಸುಧಾಕರ್, ಡೇವಿಡ್ ಮೊದಲಾದವರು ಉಪಸ್ಥಿತರಿದ್ದರು.