ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ
ಮುಲ್ಕಿ, ಮೇ 2: ದೇವಸ್ಥಾನದ ಒಳಭಾಗದಲ್ಲಿ ತಂತ್ರಿಗಳ ಪೂಜೆ, ಹೊರಗಡೆ ಭಕ್ತ ಸಮೂಹದ ಪ್ರಾರ್ಥನೆ, ನಿಷ್ಕಲ್ಮಶ ಭಕ್ತಿಯಿಂದ ದೇವರ ಸಾನಿಧ್ಯದ ವೃದ್ಧಿ ಸಾಧ್ಯ ಎಂದು ಉಡುಪಿ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.
ಕಿನ್ನಿಗೋಳಿ ಸಮೀಪದ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತಾಡಿದರು.
ಮಾಜಿ ಸಚಿವ ಅಮರನಾಥ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇ. ಮೂ. ಶಿಬರೂರು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಧಾರ್ಮಿಕ ಚಿಂತಕ ವೇ. ಮೂ. ವಿದ್ವಾನ್ ಪಂಜ ಭಾಸ್ಕರ ಭಟ್ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿ, ದೇವಸ್ಥಾನಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ಅಷ್ಟಬಂಧ ಬ್ರಹ್ಮಕಶಲ ನಡೆಯಬೇಕು. ಇದರಿಂದ ದೇವಸ್ಥಾನಗಳ ಹಾಗೂ ಅಲ್ಲಿನ ದೇವರ ಸಾನಿಧ್ಯ ವೃದ್ಧಿಯಾಗಿ, ತನ್ನ ಬಳಿಗೆ ಬಂದ ಭಕ್ತರ ಅಭಿಷ್ಟಗಳನ್ನು ತಕ್ಕಲವನ್ನು ನೀಡಲು ಸಾಧ್ಯ ಎಂದು ಹೇಳಿದರು.
ದ. ಕ. ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲು, ಕಟೀಲು ದೇವಳ ಅರ್ಚಕ ಶ್ರೀ ಅನಂತಪದ್ಮನಾಭ ಆಸ್ರಣ್ಣ , ಪಕ್ಷಿಕೆರೆ ಸಂತಜೂದರ ಯಾತ್ರಿಕ ಕೇಂದ್ರದ ಧರ್ಮಗುರು ಫಾ. ಆಂಡ್ರ್ಯು ಲಿಯೋ ಡಿಸೋಜ, ಪಕ್ಷಿಕೆರೆ ಬದ್ರಿಯಾ ಜುಮ್ಮಾ ಮಸೀದಿಯ ನಿಕಟಪೂರ್ವ ಅಧ್ಯಕ್ಷ ಹಾಜಿ ಕೆ. ಮೀರಾನ್ ಸಾಹೇಬ್, ಬೋಳ ರಘುರಾಮ ಶೆಟ್ಟಿ, ಮುಂಬೈ ಟ್ಯಾಕ್ಸ್ ಕನ್ಸಲ್ಟ್‌ಂಟ್ ಪ್ರವೀಣ್ ಬಿ. ಶೆಟ್ಟಿ , ಗೆಸ್ಪರ್ ಸೆರಾವೊ, ಜಾಗತಿಕ ಬಂಟರ ಒಕ್ಕೂಟ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬೈ ಬಾಬು ಜೆ. ಶೆಟ್ಟಿ ಕಂಬಳಿ ಮನೆ ಕಿಲೆಂಜೂರು, ರಾಜೇಶ್ ಶೆಟ್ಟಿ ಭಂಡಾರ ಮನೆ ಮುಂಬೈ, ಗೋವಿಂದ ಶೆಟ್ಟಿ ಅತ್ತೂರುಗುತ್ತು ಮುಂಬೈ, ಶಿಬರೂರು ಗುತ್ತಿನಾರ್ ಉಮೇಶ್ ಶೆಟ್ಟಿ , ಬ್ರಹ್ಮಕಶೋತ್ಸವ ಸಮಿತಿಯ ಕಾರ್ಯಧ್ಯಕ್ಷ ಅತ್ತೂರು ಬೈಲು ವೆಂಕಟರಾಜ ಉಡುಪ ಉಪಸ್ಥಿತರಿದ್ದರು.
ಬ್ರಹ್ಮಕಶೋತ್ಸವ ಸಮಿತಿಯ ಅಧ್ಯಕ್ಷ ಅತ್ತೂರು ಹೊಸಲೊಟ್ಟು ಬಾಬು ಎನ್. ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಸ್ಥಾನದ ಆಡಳಿತ ಮೊಕ್ತೇಸರ ಕೆ. ಸೀತಾರಾಮ ಶೆಟ್ಟಿ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ವಿವರಿಸಿದರು. ಮೊಕ್ತೇಸರರಾದ ಬಾಲಚಂದ್ರ ಭಟ್, ಪ್ರಕಾಶ್ ಜೆ. ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ವಿವಿಧ ಕಾಮಗಾರಿಗಳಿಗೆ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಅಂಗಡಿಮಾರ್ ಕೃಷ್ಣ ಭಟ್ ಬರೆದ ಪಂಚಾಗವನ್ನು ಪುತ್ತಿಗೆ ಶ್ರೀಗಳು ಬಿಡುಗಡೆಗೊಳಿಸಿದರು. ದೇವಸ್ಥಾನದ ಮೊಕ್ತೇಸರ ಧನಂಜಯ ಶೆಟ್ಟಿಗಾರ್ ಸಾಗರಿಕ ಸ್ವಾಗತಿಸಿದರು. ಧೀರಜ್ ಶೆಟ್ಟಿ ಮಮ್ಮೆಟ್ಟು ವಂದಿಸಿದರು. ಕೃಷ್ಣರಾಜ್ ಭಟ್ ಕೋಡು ದಾನಿಗಳ ವಿವರ ವಾಚಿಸಿದರು.