ಸ್ಟಾಕ್‌ಹೋಂ : ಶಿರವಸ್ತ್ರ ಧರಿಸುವ ಹಕ್ಕಿಗಾಗಿ ಮುಸ್ಲಿಂ ಮಹಿಳೆಯರಿಂದ ರ್ಯಾಲಿ
ಸ್ಟಾಕ್‌ಹೋಂ,ಮೇ. 3: ಅಂತಾರಾಷ್ಟ್ರೀಯ ಕಾರ್ಮಿಕ ದಿನದ ಸಮಯದಲ್ಲಿ ಈಬಾರಿಸ್ವೀಡನ್‌ನ ಬೀದಿಯಲ್ಲಿ ಮುಸ್ಲಿಮ್ ಮಹಿಳೆಯರು ರ್ಯಾಲಿ ನಡೆಸಿದ್ದಾರೆ. ಕೆಲಸದ ಸ್ಥಳಗಳಲ್ಲಿ ಶಿರೋವಸ್ತ್ರಧರಿಸುವ ತಮ್ಮ ಹಕ್ಕನ್ನು ಕೇಳಿ ಅವರುಪ್ರತಿಭಟನಾ ರ್ಯಾಲಿನಡೆಸಿದರು. ಘೋಷಣೆ ಕೂಗುತ್ತಿದ್ದ ಮುಸ್ಲಿಮ್ ಮಹಿಳೆಯರ ಕೈಯಲ್ಲಿ ಪ್ಲೇಕಾರ್ಡ್‌ಗಳು ರಾರಾಜಿಸುತ್ತಿದ್ದವು.
ಕೆಲಸದ ಸ್ಥಳಗಳಲ್ಲಿ ಉದ್ಯೋಗಿಗಳ ಧಾರ್ಮಿಕ ಚಿಹ್ನೆಯನ್ನು ನಿಷೇಧಿಸಲು ಖಾಸಗಿ ಕಂಪೆನಿಗಳಿಗೆ ಅನುಮತಿ ನೀಡಿದ ಜಸ್ಟಿಸ್ ಆಫ್ ಯುರೋಪಿಯನ್ ಯೂನಿಯನ್ ಕೋರ್ಟಿನ ತೀರ್ಪನ್ನು ವಿರೋಧಿಸಿ ಶಿರೋವಸ್ತ್ರಧಾರಿ ಮುಸ್ಲಿಮ್ ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.
ಸ್ವೀಡನ್‌ನ ರಾಜಧಾನಿ ಸ್ಟಾಕ್ ಹೋಂ, ಮಾಲ್ಮೊ, ಗುಟೆನ್‌ಬರ್ಗ್,ವಸ್ತೆರಾಸ್, ಸಾಲ,ಉಮಿಯ ಮುಂತಾದ ನಗರಗಳಲ್ಲಿಯೂ ಜನಾಂಗೀಯವಾದದ ವಿರುದ್ಧ ಘೋಷಣೆ ಕೂಗುತ್ತಾ ಮಹಿಳೆಯರು ಪ್ರತಿಭಟನೆನಡೆಸಿದ್ದಾರೆ. ’ ಕೆಲಸ ನನ್ನ ಹಕ್ಕು’ ನನ್ನ ಹಿಜಾಬ್ ನಿಮಗೆ ತೊಂದರೆ ಕೊಡುವ ವಿಷಯವಲ್ಲ’ ಮುಂತಾದ ಘೋಷಣೆಗಳನ್ನು ರ್ಯಾಲಿಯಲ್ಲಿ ಕೂಗುತ್ತಿದ್ದರು.