ಮಲಯಾಳಂ ಭಾಷೆ ಕಡ್ಡಾಯಗೊಳಿಸಿದ್ದರೂ ಕನ್ನಡಿಗರು ಆತಂಕಪಡಬೇಕಾಗಿಲ್ಲ: ಪಿಣರಾಯಿ ವಿಜಯನ್

Update: 2017-05-03 12:15 GMT


ಕಾಸರಗೋಡು, ಮೇ 3: ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಿದ್ದರೂ ಭಾಷಾ ಅಲ್ಪಾಸಂಖ್ಯಾತರು ಆತಂಕಪಡಬೇಕಾಗಿಲ್ಲ. ಕನ್ನಡ ಭಾಷೆಯನ್ನು ಸಂರಕ್ಷಿಸಿ, ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಭರವಸೆ ನೀಡಿದ್ದಾರೆ.

ಭಾಷಾ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡಿನ ಕನ್ನಡಿಗರು ಭಯಪಡಬೇಕಿಲ್ಲ. ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸಿದ್ದರೂ ಕನ್ನಡ ಪ್ರಥಮ ಭಾಷೆ ಮತ್ತು ಮಲಯಾಳಂ ದ್ವಿತೀಯ ಭಾಷೆಯಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಶಾಸಕರಾದ ಪಿ.ಬಿ. ಅಬ್ದುರ್ರಝಾಕ್ , ಎನ್.ಎ. ನೆಲ್ಲಿಕುನ್ನು, ಎಂ.ರಾಜಗೋಪಾಲ್, ಒ.ರಾಜಗೋಪಾಲ್ ನೇತೃತ್ವದಲ್ಲಿ  ಮನವಿ ಸಲ್ಲಿಸಿದ  ಕನ್ನಡ ಭಾಷಾ ಅಲ್ಪಸಂಖ್ಯಾತ ಸಂಘಟನೆಯ ಪ್ರತಿನಿಧಿಗಳು ಬುಧವಾರ ಮುಖ್ಯಮಂತ್ರಿಯನ್ನು  ಭೇಟಿಯಾದ ಸಂದರ್ಭದಲ್ಲಿ ಈ ಭರವಸೆ ನೀಡಿದ್ದಾರೆ.

ಕನ್ನಡ ಕ್ಕಿರುವ ಪ್ರಾಧಾನ್ಯತೆ ಮುಂದುವರಿಯಲಿದೆ. ಈ ಬಗ್ಗೆ ಆತಂಕ  ಬೇಡ, ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸಲಾಗುವುದು. ಹತ್ತು ವರ್ಷಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಮಲಯಾಳಂ ಕಡ್ಡಾಯಗೊಳಿಸಲಾಗುವುದು. ಈಗ ಕನ್ನಡ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಅನ್ವಯವಾಗದು. ಆದರೆ ಇನ್ನು ಮುಂದೆ ಒಂದನೇ ತರಗತಿಯಿಂದ ಮಲಯಾಳಂ ಕಲಿಕೆ ಕಡ್ಡಾಯವಾಗಲಿದೆ. ಕಾಸರಗೋಡು ಜಿಲ್ಲೆಯ ಶಾಲೆಗಳಲ್ಲಿ ಮೂರರಿಂದ ನಾಲ್ಕು ಭಾಷೆ ಕಲಿಯಬೇಕಾದ ಅನಿವಾರ್ಯತೆ  ಉಂಟಾಗುತ್ತಿದ್ದು, ಈ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಕನ್ನಡ, ಇಂಗ್ಲೀಷ್, ಹಿಂದಿ ಜೊತೆಗೆ ಮಲಯಾಳಂ ಭಾಷೆ ಕಲಿಯಬೇಕಾದ ಅನಿವಾರ್ಯತೆ ಕಾಸರಗೋಡಿನ ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ಉಂಟಾಗಿದ್ದು , ಈ ಬಗ್ಗೆ ಗಮನ ಸೆಳೆದ ಸಂದರ್ಭದಲ್ಲಿ ಪರಿಶೀಲಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News