ಅಲ್ ಫುರ್ಖಾನ್ ಅರಬಿಕ್ ಇನ್ಸಿಟ್ಯೂಟ್‌ನಲ್ಲಿ ಪ್ರತಿಭಾ ಪುರಸ್ಕಾರ
Update: 2017-05-03 20:24 IST
ಮಂಗಳೂರು, ಮೇ 3 ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ತೊಕ್ಕೊಟ್ಟಿನ ಅಲ್ ಫುರ್ಖಾನ್ ಅರಬಿಕ್ ಇನ್ಸ್‌ಟಿಟ್ಯೂಟ್ ವತಿಯಿಂದ ಬಬ್ಬುಕಟ್ಟೆಯಲ್ಲಿನ ಇನ್ಸ್‌ಟಿಟ್ಯೂಟ್ ನ ನೂತನ ಕಟ್ಟಡದ ಸಭಾಂಗಣದಲ್ಲಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅಲ್ ಅಲ್ ಫುರ್ಖಾನ್ ಅರಬಿಕ್ ಇನ್ಸ್‌ಟಿಟ್ಯೂಟ್‌ನ ಅಧ್ಯಕ್ಷ ಇಸ್ಹಾಕ್ ಕಲ್ಲಾಪು ನೆರವೇರಿಸಿದರು. ಅಲ್ ಫುರ್ಖಾನ್ ಅರಬಿಕ್ ಇನ್ಸ್‌ಟಿಟ್ಯೂಟ್ನ ಟ್ರಸ್ಟಿ ಇಸ್ಹಾಕ್ ಸನ ತೊಕ್ಕೊಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಧ್ಯಾಪಕ ಅಶೀರುದ್ದೀನ್ ಸ್ವಾಗತಿಸಿದರು. ವಿದ್ಯಾರ್ಥಿ ಅರ್ಶ್ ಕಿರಾಅತ್ ಪಠಿಸಿದರು. ಅಧ್ಯಾಪಕಿ ನೌರಿನ್ ವಂದಿಸಿದರು