×
Ad

​ಡಿಕೆಎಂಎಯಿಂದ ಫಲಾನುಭವಿಗೆ ಧನಸಹಾಯ

Update: 2017-05-03 22:00 IST

ಮಂಗಳೂರು, ಮೇ 3: ದಕ್ಷಿಣ ಕನ್ನಡ ಮುಸ್ಲಿಂ ಅಸೋಸಿಯೇಶನ್ (ಡಿಕೆಎಂಎ) ವತಿಯಿಂದ ಫಲಾನುಭವಿ ಕುಟುಂಬವೊಂದಕ್ಕೆ 2 ಲಕ್ಷ ರೂ. ಮೊತ್ತದ ಚೆಕ್‌ನ್ನು ಹಸ್ತಾಂತರಿಸಲಾಯಿತು.

ಡಿಕೆಎಂಎ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಅವರು ಕುಟುಂಬಕ್ಕೆ ಚೆಕ್ ಹಸ್ತಾಂತರಿಸಿದರು. ಈ ಸಂದರ್ಭ ಕೋಶಾಧಿಕಾರಿ ಬಿ.ಎಸ್.ಬಶೀರ್, ಸುಲೈಮಾನ್ ಕರಾಯ, ಸುಲೈಮಾನ್ ಸಾಮನಿಗೆ, ಸ್ವಾಲಿ ಮತ್ತಿತರರು ಉಪಸ್ಥಿತರಿದ್ದರು.

ಮನೆಯ ಯಜಮಾನನ ಅಗಲಿಕೆಯಿಂದ ಆರ್ಥಿಕ ಸಂಕಷ್ಟಕ್ಕೀಡಾದ ಕುಟುಂಬಕ್ಕೆ ನೆರವು ನೀಡುವ ಉದ್ದೇಶವನ್ನು ಹೊಂದಿರುವ ಸಂಸ್ಥೆಯು ಇತ್ತೀಚೆಗೆ ನಿಧನರಾದ ಅಬ್ದುಲ್ ಕರೀಮ್ ಉಪ್ಪಿನಂಗಡಿ ಅವರ ಕುಟುಂಬಕ್ಕೆ ಈ ಧನಸಹಾಯ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News