ಪೂಂಜಾಲಕಟ್ಟೆ;10 ದಿನಗಳ ಬೇಸಿಗೆ ಶಿಬಿರ ಸಮಾರೋಪ
Update: 2017-05-03 22:35 IST
ಮಂಗಳೂರು, ಮೇ 3: ಪೂಂಜಾಲಕಟ್ಟೆಯ ರಹ್ಮಾನಿಯಾ ಮದ್ರಸದಲ್ಲಿ 10 ದಿನಗಳ ಬೇಸಿಗೆ ಶಿಬಿರ ಇತ್ತೀಚೆಗೆ ಮುಕ್ತಾಯಗೊಂಡಿತು.
ಮರ್‌ಹೂಂ ಹಕಂ ಉಸ್ತಾದ್ ಕೈ ಬರಹ ಮಾಸಿಕವನ್ನು ಅಬ್ದುಲ್ ರಝಾಕ್ ಕೆಸಿಎಫ್ ಒಮಾನ್ ಬಿಡುಗಡೆಗೊಳಿಸಿದರು. ಶಿಬಿರಾರ್ಥಿಗಳಿಗೆ 30 ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಪೂಂಜಾಲಕಟ್ಟೆ ಪೊಲೀಸ್ ಉಪನಿರೀಕ್ಷಕ ಕೆ.ಚಂದ್ರಶೇಖರ್ ಕಾನೂನಿನ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕ ನಿರಂಜನ್ ಜೈನ್ ಡಿ. ಆರೋಗ್ಯ, ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹಾಫಿಝ್ ಸುಫ್ಯಾನ್ ಸಖಾಫಿ, ಅಬ್ದುಲ್ ಹಮೀದ್ ಫೈಝಿ, ಅಬ್ದುಲ್ ಸಲಾಂ ಮುಸ್ಲಿಯಾರ್, ಮುಹಮ್ಮದ್ ಶರೀಫ್ ಸಅದಿ ಪಾನೇಲ, ಅಬ್ದುರ್ರಝಾಕ್ ಸಖಾಫಿ, ಜಮಾಲುದ್ದೀನ್ ಮುಈನಿ ಅಲ್‌ಅಝ್‌ಹರಿ, ಯು.ಮುಹಮ್ಮದ್, ಪಿ. ಮುಹಮ್ಮದ್, ಸಂಶುದ್ದೀನ್ ಅಹ್ಸನಿ, ಎಸ್ಸೆಸ್ಸೆಫ್, ಆರ್‌ವೈಎಫ್ ಪದಾಧಿಕಾರಿಗಳು ಭಾಗವಹಿಸಿದ್ದರು.
ಖತೀಬ್ ಮುಹಮ್ಮದ್ ಶರೀಫ್ ಸಅದಿ ಮೂಡಬಿದ್ರೆ ಕಾರ್ಯಕ್ರಮ ನಿರೂಪಿಸಿದರು.