ಕಣ್ಣೂರು: ಮೇ 4ರಂದು ಅಮಲುಮುಕ್ತ ಸಮಾಜ ಮಾಹಿತಿ ಕಾರ್ಯಾಗಾರ
Update: 2017-05-03 23:00 IST
ಮಂಗಳೂರು, ಮೇ 3: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಮಂಗಳೂರು ವಿವಿಯ ಸಮಾಜ ಕಾರ್ಯವಿಭಾಗ ಹಾಗೂ ಕಣ್ಣೂರಿನ ಅಂಜುಮಾನ್ ಸೋಶಿಯಲ್ ಅಸೋಸಿಯೇಷನ್ ಆಶ್ರಯದಲ್ಲಿ ಕಣ್ಣೂರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮೇ 4ರಂದು ಅಮಲು ಮುಕ್ತ ಸಮಾಜ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಅಂದು ಸಂಜೆ 7 ಗಂಟೆಗೆ ನಡೆಯುವ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಅಡ್ಯಾರ್ ಕಣ್ಣೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಮೌಲನಾ ರಷೀದ್ ಹನೀಫಿ, ಪೊಲೀಸ್ ಇನ್‌ಸ್ಪೆಕ್ಟರ್ ಮುಹಮ್ಮದ್ ರಫೀಕ್, ಮನೋರೋಗ ತಜ್ಞೆ ಡಾ. ಕೆರೊಲಿನ್ ಪಿ. ಡಿಸೋಜ ಭಾಗವಹಿಸುವರು ಎಂದು ಪ್ರಕಟನೆ ತಿಳಿಸಿದೆ.