ಆಧಾರ್ ಕಾರ್ಡ್ ನೋಂದಣಿ ಅಭಿಯಾನ ಉದ್ಘಾಟನೆ
Update: 2017-05-03 23:13 IST
ಮಂಗಳೂರು, ಮೇ 3: ನಗರದ ಕುದ್ರೋಳಿ ಸರಕಾರಿ ಉರ್ದು ಶಾಲೆಯಲ್ಲಿ ಬಳಿ ಆಧಾರ್ ಕಾರ್ಡ್ ನೋಂದಣಿ ಅಭಿಯಾನದ ಉದ್ಘಾಟನಾ ಕಾರ್ಯಕ್ರಮ ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜ ಅಧ್ಯಕ್ಷತೆಯಲ್ಲಿ ನಡೆಯಿತು.
ಕೆ.ಎಸ್. ಮುಹಮ್ಮದ್ ಮಸೂದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಡುಪಳ್ಳಿ ಜುಮ್ಮಾ ಮಸೀದಿಯ ಧರ್ಮಗುರುಗಳು ಅಯೂಬ್ ಉಸ್ತಾದ್ ದುಆ ನೆರವೇರಿಸಿದರು.
ಸಮಾರಂಭದಲ್ಲಿ ಮಾಜಿ ಮೇಯರ್ ಅಶ್ರಫ್ , ಸಿ.ಎಂ. ಮುಸ್ತಫಾ, ಜೆ. ನಾಗೇಂದ್ರ ಕುಮಾರ್, ಹಬೀಬುಲ್ಲಾ, ಲಯನ್ ಚಂದ್ರಶೇಖರ್ ಗಟ್ಟಿ, ಗಣೇಶ್ ಪೂಜಾರಿ, ಜೆ. ಶಶಿಕಾಂತ್ ಶೆಟ್ಟಿ, ಸತೀಶ್ ಪೆಂಗಲ್, ಅನಿಲ್ ತೋರಸ್, ಆನಂದ್ ಸೋನ್ಸ್, ರೆಹಮತುಲ್ಲಾ ಕುದ್ರೋಳಿ, ಇರ್ಫಾನ್ ಅಳಕೆ ಮುಂತಾದವರು ಉಪಸ್ಥಿತರಿದ್ದರು. ಮನ್ಸೂರ್ ಕುದ್ರೋಳಿ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮ ನಿರೂಪಿಸಿದರು. ಮುದಸಿರ್ ಕುದ್ರೋಳಿ ಸ್ವಾಗತಿಸಿದರು, ನವೀನ್ ಸ್ಟೀವನ್ ವಂದಿಸಿದರು.