×
Ad

ಪೆರ್ಮುದೆ: ಹೊಟೇಲ್‌ಗೆ ಮರಬಿದ್ದು ಮಾಲಕ ಸಾವು; ಇಬ್ಬರು ಪಾರು

Update: 2017-05-03 23:39 IST

ಬಜ್ಪೆ, ಮೇ 3: ಮಂಗಳವಾರ ಸುರಿದ ಭಾರೀ ಮಳೆಗೆ ಹೊಟೇಲ್ ಮೇಲೆ ಮರವೊಂದು ಬಿದ್ದು ಹೊಟೇಲ್‌ನ ಮಾಲಕ ಸಾವನ್ನಪ್ಪಿರುವ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಮುದೆ ಎಂಬಲ್ಲಿ ನಡೆದಿದೆ.

ಮೃತರನ್ನು ಸುಂದರ (60) ಎಂದು ಗುರುತಿಸಲಾಗಿದೆ. ಪ್ರತೀರಾತ್ರಿ ವೇಳೆ ಮರುದಿನಕ್ಕೆ ತಿಂಡಿ ತಿನಿಸು ತಯಾರಿಸಲು ಬೇಕಾದ ವ್ಯವಸ್ಥೆಯನ್ನು ಮಾಡಿ ಸುಂದರ ಮನೆಗೆ ತೆರಳುತ್ತಿದ್ದರು. ಅದರಂತೆ ಮಂಗಳವಾರ ರಾತ್ರಿಯೂ ಕೆಲಸ ಮಾಡುತ್ತಿದ್ದ ವೇಳೆ ಅಚಾನಕ್ಕಾಗಿ ಬಂದ ಬಿರುಗಾಳಿ ಸಹಿತ ಮಳೆಗೆ ಹೊಟೇಲ್‌ನ ಪಕ್ಕದಲ್ಲಿದ್ದ ಬೃಹದಾಕಾರದ ಮರ ಹೊಟೇಲ್‌ನ ಮೇಲೆ ಉರುಳಿ ಬಿದ್ದಿದೆ. ಘಟನೆಯಿಂದ ಸುಂದರ ಮರದ ಕೊಂಬೆಗಳ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದರು. ಘಟನೆ ನಡೆದ ವೇಳೆ ಸುಂದರ ಅವರ ಪತ್ನಿ ಮತ್ತು ಮಗ ಹೊಟೇಲ್ ಒಳಗೆ ಮಲಗಿದ್ದರು. ಆದರೆ, ಅವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ತಿಳಿದು ಬಂದಿದೆ.

ಈ ಸಂಬಂಧ ಬಜ್ಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News