×
Ad

ಕಿದಿಯೂರು: ಲಕ್ಷಾಂತರ ಮೌಲ್ಯದ ನಗ-ನಗದು ಕಳವು

Update: 2017-05-04 16:04 IST

ಉಡುಪಿ, ಮೇ 4: ಮನೆಯಲ್ಲಿ ಯಾರು ಇಲ್ಲದ ವೇಳೆ ನುಗ್ಗಿರುವ ಕಳ್ಳರು ಸುಮಾರು 50 ಲಕ್ಷ ರೂ. ವೌಲ್ಯದ ನಗ-ನಗದು ಕಳವುಗೈದು ಪರಾರಿಯಾಗಿರುವ ಘಟನೆ ತಾಲೂಕಿನ ಅಂಬಲಪಾಡಿ ಕಿದಿಯೂರಿನಲ್ಲಿಂದು ಬೆಳಕಿಗೆ ಬಂದಿದೆ.
ದಿವಾಕರ ಪೂಜಾರಿ ಎಂಬವರಿಗೆ ಸೇರಿದ ಮನೆಯಿಂದ ಈ ಕಳವು ನಡೆದಿದೆ. ದಿವಾಕರ ಅವರು ಕತರ್‌ನಲ್ಲಿ ನೆಲೆಸಿದ್ದು, ಕೆಲವು ತಿಂಗಳ ಹಿಂದೆಯಷ್ಟೇ ಊರಿಗೆ ಆಗಮಿಸಿದ್ದರು. ಮನೆಯ ಕೆಳಗಿನ ಕೋಣೆಯನ್ನು ಅವರು ಬಾಡಿಗೆಗೆ ನೀಡಿದ್ದರು. ಆದರೆ ಬಾಡಿಗೆಗೆದಾರರು ವಾರದ ಹಿಂದೆ ಮಂಗಳೂರಿಗೆ ತೆರಳಿದ್ದವರು ಇಂದು ಮನೆಗೆ ಹಿಂದಿರುಗಿದ್ದರು. ಈ ವೇಳೆ ಕೃತ್ಯ ಬೆಳಕಿಗೆ ಬಂದಿದೆ.
ಬಾಡಿಗೆಗೆ ಇದ್ದವರ ಹಾಗೂ ದಿವಾಕರ ಮನೆಯ ಬಾಗಿಲು ಮುರಿದು ಈ ಕಳ್ಳತನ ನಡೆಸಲಾಗಿದೆ.
ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಶ್ವಾನದಳವನ್ನು ಕರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News