ದೂರು ಹಿಂಪಡೆಯಲು ಬೆದರಿಕೆಯೊಡ್ಡಿ ಮನೆಗೆ ನುಗ್ಗಿದ ತಂಡದಿಂದ ಹಲ್ಲೆ
ಕುಂಜತ್ತೂರು, ಮೇ 4: ಒಂದೂವರೆ ವರ್ಷಕ್ಕೆ ಮೊದಲು ಮಸೀದಿಯೊಂದಕ್ಕೆ ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿ ದಾಖಲಾದ ಕೇಸನ್ನು ಕೂಡಲೇ ಹಿಂತೆಗೆದು 30 ಸಾವಿರ ರೂ. ನಷ್ಟ ಪರಿಹಾರ ನೀಡಬೇಕೆಂದು ಬೆದರಿಸಿ ತಂಡವೊಂದು ಮಸೀದಿಯ ಮಾಜಿ ಅಧ್ಯಕ್ಷರ ಮನೆಗೆ ನುಗ್ಗಿ, ಚಿನ್ನದ ಸರವೊಂದನ್ನು ಕಸಿದು, ಮನೆಯ ಸದಸ್ಯರಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಕುಂಜತ್ತೂರು ಪದವು ನಿವಾಸಿ ಇಬ್ರಾಹಿಂ (65) ಇವರ ಪುತ್ರಿ ಝರೀನಾ (38) ಮತ್ತು ಪುತ್ರ ನಿಝಾರ್ (40) ಹಲ್ಲೆಗೊಳಗಾದವರು.
ಕುಂಜತ್ತೂರು ಪದವು ಮಸೀದಿಯ ಮಾಜಿ ಅಧ್ಯಕ್ಷರ ಮನೆಗೆ ನುಗ್ಗಿದ ಹತ್ತು ಮಂದಿಯ ತಂಡವೊಂದು ಮನೆಗೆ ನುಗ್ಗಿ ಮಹಿಳೆಯ ಸರವನ್ನು ಎಗರಿಸಿ ಅತ್ಯಾಚಾರಕ್ಕೆ ಯತ್ನಿಸಿದೆ. ಪುತ್ರಿಯ ಕುತ್ತಿಗೆಯಲ್ಲಿದ್ದ ಸರವನ್ನು ಎಗರಿಸಲು ಪ್ರಯತ್ನಿಸಿದಾಗ ಅದನ್ನು ತಡೆಯಲು ಹೋದ ತಂದೆ ಹಾಗೂ ಸಹೋದರನಿಗೆ ಹಲ್ಲೆಗೈದಿದೆ ಎಂದು ದೂರು ನೀಡಲಾಗಿದೆ.
ಗಾಯಾಳುಗಳು ಕಾಸರಗೋಡು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ಬಗ್ಗೆ ಮಂಜೇಶ್ವರ ಪೊಲೀಸರಿಗೆ ದೂರು ನೀಡಲಾಗಿದೆ.