×
Ad

​ಉಳ್ಳಾಲ: ಸಮುದ್ರಪಾಲಾಗುತ್ತಿದ್ದ ನಾಲ್ವರು ಮಹಿಳೆಯರ ರಕ್ಷಣೆ

Update: 2017-05-04 20:28 IST

ಉಳ್ಳಾಲ, ಮೇ 4: ಉಳ್ಳಾಲದ ಸೈಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿ ವಿಹಾರಕ್ಕೆಂದು ಸಮುದ್ರ ಬದಿಗೆ ತೆರಳಿದ್ದ ವೇಳೆ ಸಮುದ್ರದ ಅಲೆಗಳಿಗೆ ಸಿಲುಕಿ ನೀರುಪಾಲಾಗುತ್ತಿದ್ದ ನಾಲ್ವರು ಮಹಿಳೆಯರನ್ನು ಸ್ಥಳೀಯರು ರಕ್ಷಿಸಿದ ಘಟನೆ ಗುರುವಾರ ನಡೆದಿದೆ.

ಮೈಸೂರು ಹಾಗೂ ಬೆಂಗಳೂರಿನಿಂದ ಸುಮಾರು ಹತ್ತು ಮಂದಿಯ ತಂಡ ದರ್ಗಾಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿತ್ತು. ಬಳಿಕ ಉಳ್ಳಾಲ ಸೈಯದ್ ಮದನಿ ಆಸ್ಪತ್ರೆ ಹಿಂಭಾಗದಲ್ಲಿರುವ ಬೀಚ್‌ಗೆ ತೆರಳಿತ್ತು ಎನ್ನಲಾಗಿದೆ. ಈ ಸಂದರ್ಭ ಬೃಹತ್ ಅಲೆಯೊಂದಕ್ಕೆ ನಾಲ್ವರು ಮಹಿಳೆಯರು ಸಿಲುಕಿದ್ದು, ಅವರು ನೀರುಪಾಲಾಗುತ್ತಿದ್ದುದನ್ನು ಕಂಡು ಉಳಿದವರು ಬೊಬ್ಬಿಟ್ಟಿದ್ದಾರೆ. ಈ ಸಂದರ್ಭ ಸ್ಥಳೀಯರಾದ ಖಾಸಿಂ ಮೇಲಂಗಡಿ, ಹಸೈನಾರ್ ಬೊಟ್ಟು, ಚೆರುಮೋನು ಬೊಟ್ಟು ಸಮುದ್ರಪಾಲಾಗುತ್ತಿದ್ದ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News