×
Ad

ಇರಾನ್ ಗಣಿ ಸ್ಫೋಟ: ಮೃತರ ಸಂಖ್ಯೆ 22ಕ್ಕೆ

Update: 2017-05-04 20:33 IST

 ಟೆಹರಾನ್, ಮೇ 4: ಇರಾನ್‌ನ ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 22ಕ್ಕೇರಿದೆ.
ರಕ್ಷಣಾ ಕಾರ್ಯಕರ್ತರು ಗುರುವಾರ ಗಣಿಯಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರನ್ನು ರಕ್ಷಿಸಲು ಅಪಾಯಕಾರಿ ಸನ್ನಿವೇಶದಲ್ಲಿ ರಕ್ಷಣಾ ಪ್ರಯತ್ನಗಳನ್ನು ನಡೆಸಿದರಾದರೂ ಅದು ವಿಫಲವಾಯಿತು. ಗೋಲೆಸ್ತಾನ್ ಪ್ರಾಂತದ ಆಝಾದ್‌ಶಹರ್‌ನಲ್ಲಿರುವ ಗಣಿಯಲ್ಲಿ ಸ್ಫೋಟ ಸಂಭವಿಸಿ 28 ಗಂಟೆಗಳಿಗೂ ಹೆಚ್ಚು ಸಮಯ ಕಳೆದಿದ್ದು ಇನ್ನೂ ನಾಪತ್ತೆಯಾಗಿರುವ 13 ಕಾರ್ಮಿಕರನ್ನು ಜೀವಂತವಾಗಿ ಹೊರತೆಗೆಯುವ ಭರವಸೆ ಕ್ಷೀಣಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News