ಕಡಿಮೆ ಅಂಕದಿಂದ ಮನನೊಂದ ಬಾಲಕ ನೇಣಿಗೆ ಶರಣು
Update: 2017-05-04 22:18 IST
ಮಂಗಳೂರು, ಮೇ 4: ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದರಿಂದ ಮನನೊಂದ ಬಾಲಕನೋರ್ವ ಮನೆಯ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ.
ಕುಪ್ಪೆಪದವು ಕಲ್ಲಾಡಿ ನಿವಾಸಿ ಯತೀಶ್ (15) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಈತ ಕುಪ್ಪೆಪದವು ಸಮೀಪದ ಹೈಸ್ಕೂಲ್‌ನಲ್ಲಿ 9ನೆ ತರಗತಿಯಲ್ಲಿ ಓದುತ್ತಿದ್ದು, ಇತ್ತೀಚೆಗೆ ಬಂದ ಪರೀಕ್ಷಾ ಫಲಿತಾಂಶದಲ್ಲಿ ಕಡಿಮೆ ಅಂಕ ಬಂತೆಂದು ನೊಂದಿದ್ದ ಎಂದು ಹೇಳಲಾಗಿದೆ.
ಗುರುವಾರ ಬೆಳಗ್ಗೆ ಸ್ಥಳೀಯವಾಗಿ ನಡೆಯಲಿದ್ದ ಮೆಹಂದಿ ಕಾರ್ಯಕ್ರಮಕ್ಕೆ ಹೋಗಬೇಕೆಂದು ಹೇಳಿ, ಮಧ್ಯಾಹ್ನ ಏಕಾಏಕಿ ಮನೆ ಪಕ್ಕಾಸಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆಂದು ತಿಳಿದು ಬಂದಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.