ರಸ್ತೆಬದಿಯಲ್ಲೇ ಗಾಂಜಾ ಸೇವನೆ: ಯುವಕನ ಬಂಧನ
Update: 2017-05-04 22:19 IST
ಮಂಗಳೂರು, ಮೇ 4: ರಸ್ತೆ ಬದಿ ನಿಂತು ಗಾಂಜಾ ಸೇವನೆ ಮಾಡುತ್ತಿದ್ದ ಯುವಕನನ್ನು ಕಂಕನಾಡಿ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಶಕ್ತಿನಗರದ ನೀತಿನಗರ ನಿವಾಸಿ ಪೃಥ್ವಿರಾಜ್ (20) ಎಂದು ಗುರುತಿಸಲಾಗಿದೆ.
ಗುರುವಾರ ಶಕ್ತಿನಗರ ಪದವು ಗ್ರಾಮದ ಮುಗ್ರೋಡಿಯಲ್ಲಿ ಯುವಕನೊಬ್ಬ ಗಾಂಜಾ ಸೇವನೆ ಮಾಡುತ್ತಿದ್ದಾನೆಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಯುವಕನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ಮಾಡಿದಾಗ ಗಾಂಜಾ ಸೇವಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ನಂತರ ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.
ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.