×
Ad

ಮೂಡುಬಿದಿರೆಯಲ್ಲಿ ‘ನಂಡೆ ಪೆಂಙಳ್’ ಕಾರ್ಯಕ್ರಮ

Update: 2017-05-06 13:43 IST

ಮೂಡುಬಿದಿರೆ: ಮೇ 6, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ‘ನಂಡೆ ಪೆಂಙಳ್’ ಜಾಗೃತಿ ಕಾರ್ಯಕ್ರಮವು ಮೂಡುಬಿದಿರೆ ಸಮಾಜ ಮಂದಿರದಲ್ಲಿ ಇತ್ತೀಚಿಗೆ ನಡೆಯಿತು.

ಮೂಡುಬಿದಿರೆ ಜುಮಾ ಮಸೀದಿಯ ಖತೀಬ್ ಮುಸ್ತಫಾ ಯಮಾನಿ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಜಮೀಯತುಲ್ ಫಲಾಹ್ ಮೂಡುಬಿದಿರೆ ಘಟಕದ ಅಧ್ಯಕ್ಷ ಅಬ್ದುಲ್ ಗಫೂರ್ ಸಾಹೇಬ್, ಕೋಶಾಧಿಕಾರಿ ಹಸ್ದುಲ್ಲಾ ಇಸ್ಮಾಯೀಲ್, ಹಾಜಿ ಅಬ್ದುಲ್ ರಹಿಮಾನ್ ಇಂಡಿಯನ್ ಟಿಂಬರ್, ಸಿ.ಎಚ್.ಗಫೂರ್, ಎಂ.ಎಚ್.ಮುಹಮ್ಮದ್ ಶರೀಫ್ ಇಂಜಿನಿಯರ್, ಇಬ್ರಾಹೀಂ ಪಟ್ಟಾಡಿ, ಹಾಜಿ ಅಬ್ದುಲ್ ರಹಿಮಾನ್ ಹಾಸ್ಕೊ, ಮೂಡುಬಿದಿರೆ ರೇಂಜ್ ಮದ್ರಸ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಅಬ್ದುಲ್ ರಹಿಮಾನ್ (ಅಬ್ಬುವಾಕ), ಕಾರ್ಯದರ್ಶಿ ಶಬೀರ್ ಅಂಗರಕರಿಯ, ಎಸ್ಕೆಎಸ್ಸೆಸ್ಸೆಫ್ ಮೂಡುಬಿದಿರೆ ವಲಯದ ಅಧ್ಯಕ್ಷ ಅಬ್ದುಲ್ ಅಝೀಝ್ ಮಲಿಕ್, ಟಿ.ಆರ್.ಎಫ್. ಸಲಹೆಗಾರ ಮುಹಮ್ಮದ್ ಬೆಳ್ಳಚ್ಚಾರು, ಸೂರಿಂಜೆ ಮಸೀದಿಯ ಅಧ್ಯಕ್ಷ ಉಸ್ಮಾನ್ ಅಬ್ದುಲ್ಲ, ಮುಹಮ್ಮದ್ ಹನೀಫ್ ಅಲಂಗಾರು ಮೊದಲಾದವರು ಉಪಸ್ಥಿತರಿದ್ದರು.

‘ನಂಡೆ ಪೆಂಙಳ್’ ಸ್ವಾಗತ ಸಮಿತಿಯ ಅಧ್ಯಕ್ಷ ನೌಷಾದ್ ಹಾಜಿ ಸೂರಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಯ ಮೂವತ್ತು ಮೀರಿಯೂ ಮದುವೆಯಾಗದ ಸಹೋದರಿಯರ ದಾರುಣ ಪರಿಸ್ಥಿತಿಯನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ರಫೀಕ್ ಮಾಸ್ಟರ್ ವಿವರಿಸಿದರು.

ಟಿ.ಆರ್.ಎಫ್. ಸಲಹೆಗಾರ ಅಬುಲ್ ಆಲ ಪುತ್ತಿಗೆ ಸ್ವಾಗತಿಸಿದರು. ಟಿ.ಆರ್.ಎಫ್ ಕಾರ್ಯಕ್ರಮ ಸಂಯೋಜಕ ಅಸ್ಫರ್ ಹುಸೈನ್ ಪ್ರಸ್ತಾವನೆಗೈದರು. ಟಿ.ಆರ್.ಎಫ್. ಪ್ರಧಾನ ಕಾರ್ಯದರ್ಶಿ ಡಿ.ಅಬ್ದುಲ್ ಹಮೀದ್ ಕಣ್ಣೂರು ಧನ್ಯವಾದಗೈದರು. ನಂಡೆ ಪೆಂಙಳ್ ಸಂಚಾಲಕ ಯು.ಬಿ.ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಮೂಡುಬಿದಿರೆ ವಲಯ ನಂಡೆ ಪೆಂಙಳ್ ಸಮಿತಿಯನ್ನು ರಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News