×
Ad

ಮೇ 7ರಂದು ಉಳ್ಳಾಲ ಸೈಯದ್ ಮದನಿ ಅರಬಿಕ್ ಕಾಲೇಜಿನ ಸನದುದಾನ ಸಮ್ಮೇಳನ

Update: 2017-05-06 16:11 IST

ಉಳ್ಳಾಲ, ಮೇ 6: ಉಳ್ಳಾಲ ಸೈಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಅಧೀನದಲ್ಲಿರುವ ಸೈಯದ್ ಮದನಿ ಅರಬಿಕ್ ಕಾಲೇಜಿನ 47ನೆ ವಾರ್ಷಿಕ ಹಾಗೂ 36ನೆ ಸನದುದಾನ ಸಮ್ಮೇಳನವು ಮೇ 7ರಂದು ಅಪರಾಹ್ನ 2:30ಕ್ಕೆ ದರ್ಗಾ ವಠಾರದಲ್ಲಿ ನಡೆಯಲಿದೆ.

ಸೈಯದ್ ಚೆರುಕುಂಞಿ ತಂಙಳ್‌ರ ದುಆದೊಂದಿಗೆ, ಟ್ರಸ್ಟ್ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಹಾಜಿ ಅಹ್ಮದ್ ಬಾವ ಮುಸ್ಲಿಯಾರ್ ಉದ್ಘಾಟಿಸುವರು.  ಅಬ್ದುಲ್ ರಶೀದ್ ಮದನಿ ಸನದುದಾನ ಪ್ರಭಾಷಣ ಮಾಡಲಿದ್ದಾರೆ.

58 ವಿದ್ಯಾರ್ಥಿಗಳಿಗೆ ಮದನಿ (ಎಂ.ಎಫ್.ಎಂ. ಮೌಲವಿ ಫಾಲಿಲ್ ಮದನಿ) ಬಿರುದು ಪಡೆಯಲಿದ್ದಾರೆ.

ಹಾಜಿ ಎಂ.ಅಮೀರ್ ಸ್ವಾಗತಿಸುವರು. ಮುಖ್ಯ ಅಥಿತಿಗಳಾಗಿ ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಕಣಚೂರು ಮೋನು ಹಾಜಿ, ಹಾಜಿ ಯು.ಎಸ್.ಹಂಝ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮತ್ತು ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಸದಸ್ಯ ಯು.ಟಿ. ಖಾದರ್, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ವಕ್ಫ್ ಸಚಿವರಾದ ರೋಶನ್ ಬೇಗ್, ಶಾಸಕರಾದ ಮೊಯ್ದಿನ್ ಬಾವ, ದ.ಕ. ಜಿಲ್ಲಾ ವಕ್ಫ್ ಮಾಜಿ ಅಧ್ಯಕ್ಷ ಹಾಜಿ ವೈ ಮುಹಮ್ಮದ್ ಕುಂಞಿ, ಎಸ್.ಎಂ.ರಶೀದ್ ಹಾಜಿ, ಉಳ್ಳಾಲ ನಗರಸಬೆ ಅಧ್ಯಕ್ಷ ಹುಸೈನ್ ಕುಂಞಿಮೋನು ಸೇರಿದಂತೆ ಹಲವಾರು ಸಾಮಾಜಿಕ, ಧಾರ್ಮಿಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News