×
Ad

ತಂದೆಯಿಂದ 10 ಲಕ್ಷ ರೂ. ಕೀಳಲು ತನ್ನದೇ ಅಪಹರಣ ನಾಟಕ ಹೆಣೆದ ವಿದ್ಯಾರ್ಥಿನಿ

Update: 2017-05-06 21:11 IST

ನೊಯ್ಡ,ಮೇ 6: ತನ್ನ ತಂದೆಯಿಂದಲೇ ಹಣವನ್ನು ಕೀಳುವ ದುರುದ್ದೇಶದಿಂದ 20 ವರ್ಷ ವಯಸ್ಸಿನ ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ತನ್ನ ಅಪಹರಣದ ಸಂಚನ್ನು ತಾನೇ ರೂೂಪಿಸಿ, ಸಿಕ್ಕಿಬಿದ್ದ ಘಟನೆ ಶುಕ್ರವಾರ ವರದಿಯಾಗಿದೆ. ಯುವತಿ ಮುಸ್ಕಾನ್ ಅಗರ್‌ವಾಲ್ ತನ್ನ 20-24 ವರ್ಷ ವಯಸ್ಸಿನ ಮೂವರು ಗೆಳೆಯರ ಜೊತೆ ಸೇರಿ, ತನ್ನ ಅಪಹರಣದ ನಾಟಕವನ್ನು ಹೆಣೆದಿದ್ದಳು. 10 ಲಕ್ಷ ರೂ. ಒತ್ತೆ ಹಣವನ್ನು ತನ್ನ ಖಾತೆಗೆ ವರ್ಗಾಯಿಸುವಂತೆಯೂ ಆಕೆ ತಂದೆಗೆ ಎಸ್‌ಎಂಎಸ್ ಸಂದೇಶ ಕಳುಹಿಸಿದ್ದಳು. ಆದರೆ ಉತ್ತರಪ್ರದೇಶ ವಿಶೇಷ ಕಾರ್ಯಾಚರಣೆ ತಂಡವು ಪ್ರಕರಣದ ಬೆನ್ನುಹಿಡಿದಾಗ, ವಿದ್ಯಾರ್ಥಿನಿಯ ಅಪಹರಣ ಪ್ರಹಸನ ಬಯಲಾಯಿತು.

     ನೊಯ್ಡದಲ್ಲಿ ಎಂಜಿನಿಯರಿಂಗ್ ಓದುತ್ತಿರುವ ಮುಸ್ಕಾನ್‌ಗೆ, ಆಕೆಯ ತಂದೆ ಶಿವ್ ಅಗರ್‌ವಾಲ್ ಮಧ್ಯಾಹ್ನ 2:50ರ ವೇಳೆಗೆ ಕಾನ್‌ಪುರದಿಂದ ಕರೆ ಮಾಡಿದಾಗ ಹಲವಾರು ಮಂದಿ ಮುಸ್ಕಾನ್‌ಳ ಹಾಸ್ಟೆಲ್ ಕೊಠಡಿಯನ್ನು ಪ್ರವೇಶಿಸಿದಂತಹ ಸದ್ದು ಹಾಗೂ ಆಕೆ ಕಿರುಚುತ್ತಿರುವುದು ಕೇಳಿಸಿತ್ತು. ಆನಂತರ ಅರಿಗೆ ಮುಸ್ಕಾನ್‌ಳ ಮೊಬೈಲ್‌ನಿಂದ ಆಗಮಿಸಿದ ಎರಡು ಎಸ್‌ಎಂಎಸ್ ಸಂದೇಶಗಳು ಬಂದಿದ್ದವು. ಮುಸ್ಕಾನ್‌ಳನ್ನು ಅಪಹರಿಸಲಾಗಿದ್ದು, ಆಕೆ ಬಿಡುಗಡೆಗೊಳ್ಳಬೇಕಾದರೆ ಆಕೆಯ ಖಾತೆಗೆ ಕೂಡಲೇ 10 ಲಕ್ಷ ರೂ. ವರ್ಗಾಯಿಸಬೇಕೆಂದು ಎಸ್‌ಎಂಎಸ್‌ನಲ್ಲಿ ಬೆದರಿಸಲಾಗಿತ್ತು.

 ಗಾಬರಿಗೊಂಡ ಶಿವ್ ಅಗರ್‌ವಾಲ್ ಅವರು ಮುಸ್ಕಾನ್‌ಳ ಖಾತೆಗೆ ಕಾನ್‌ಪುರದಲ್ಲಿರುವ ತನ್ನ ಬ್ಯಾಂಕ್‌ಖಾತೆಯಿಂದ 10 ಲಕ್ಷ ರೂ. ವರ್ಗಾಯಿಸಿದರು. ಈ ಮಧ್ಯೆ ನೊಯ್ಡೆದ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಹಣ ವರ್ಗಾವಣೆಯ ಬಳಿಕ ಮುಸ್ಕಾನ್‌ಳ ನೊಯ್ಡಾದಲ್ಲಿರುವ ಬ್ಯಾಂಕ್ ಖಾತೆಯಿಂದ ಮೂರು ಬಾರಿ ವ್ಯವಹಾರಗಳು ನಡೆದಿರುವುದು ಪೊಲೀಸರ ಗಮನಕ್ಕೆ ಬಂದಿತು. ಇದೇ ವೇಳೆ ಸ್ವಲ್ಪ ಮೊತ್ತವು ಆಕೆಯ ಇ-ವ್ಯಾಲೆಟ್ ಖಾತೆಗೂ ವರ್ಗಾವಣೆಯಾಗಿರುವುದು ಪೊಲೀಸರ ಸಂದೇಹಕ್ಕೆ ಕಾರಣವಾಯಿತು.

     ಕೂಡಲೇ ಎಸ್‌ಟಿಎಫ್ ತಂಡಗಳು ಬ್ಯಾಂಕ್‌ಗೆ ಧಾವಿಸಿದಾಗ ಎಟಿಎಂನಲ್ಲಿ ನಡೆದ ವರ್ಗಾವಣೆಗಳನ್ನು ಪರಿಶೀಲಿಸಿತು ಹಾಗೂ ಅಲ್ಲಿದ್ದ ಸಿಸಿಟಿವಿಯಲ್ಲಿ ಮುಸ್ಕಾನ್‌ಳ ಸ್ನೇಹಿತರಾದ ಪಿ.ಆನಂತ್ ಹಾಗೂ ರಿತುರಾಜ್‌ಸಿಂಗ್ ಅವರ ಗುರುತು ಪತ್ತೆಹಚ್ಚ್ಕಿತು. ಆನಂತರ ಮುಸ್ಕಾನ್ ಆಗೂ ಆಕೆಯ ಪ್ರಿಯತಮ ಆದಿತ್ಯ ಶ್ರೀವಾಸ್ತವನನ್ನು ಪಾರ್ಕೊಂದರಲ್ಲಿ ಪತ್ತೆಹಚ್ಚಿತು. ಇನ್ನಿಬ್ಬರು ಆರೋಪಿಗಳಾದ ಪಿ.ಆನಂತ್ ಹಾಗೂ ರಿತುರಾಜ್ ಅವರನ್ನು ಸಮೀಪದ ಮಾರುಕಟ್ಟೆಯೊಂದರಲ್ಲಿ ಬಂಧಿಸಿದರು. ವಿಚಾರಣೆಯ ವೇಳೆ ಮುಸ್ಕಾನ್‌ಳು, ತನ್ನ ಸ್ನೇಹಿತೆಯೊಬ್ಬಳ ವಿದ್ಯಾಭ್ಯಾಸಕ್ಕಾಗಿ 4 ಲಕ್ಷ ರೂ. ಸಾಲ ನೀಡಿದ್ದೆ. ಆ ಹಣವನ್ನು ಮರಳಿ ಪಡೆಯುವಂತಚೆ ತಂದೆ ಬಲವಂತಪಡಿಸಿದ್ದರು. ತಂದೆಯಿಂದಲೇ ಒತ್ತೆ ಹಣವನ್ನು ಪಡೆದು, ಅದರಿಂದಲೇ ಅವರಿಗೆ ನೀಡಬೇಕಾದ ಹಣವನ್ನು ಮರುಪಾವತಿಸುವ ಉದ್ದೇಶದಿಂದ ತಾನು ಅಪಹರಣದ ನಾಟಕವನ್ನು ಹೆಣೆದಿದ್ದಾಗಿ ತಿಳಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News