ಸಿಡಿಲು ಬಡಿದು ಕಾರ್ಮಿಕನಿಗೆ ಗಾಯ
Update: 2017-05-06 22:49 IST
ಬೆಳ್ತಂಗಡಿ, ಮೇ 6: ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ವ್ಯಕ್ತಿಯೋರ್ವರು ಗಾಯಗೊಂಡಿರುವ ಘಟನೆ ಸೋಮಂತಡ್ಕ ಸಮೀಪ ಕಾನರ್ಪ ಎಂಬಲ್ಲಿ ಸಂಭವಿಸಿದೆ.
ಕಡಿರುಧ್ಯಾವರ ಗ್ರಾಮದ ನಿವಾಸಿ ಜಯಗೌಡ ಎಂಬವರು ಕಾನರ್ಪದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಗಾಯಾಗೊಂಡ ಅವರನ್ನು ಉಜಿರೆಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಸಂಜೆಯ ವೇಳೆ ಗಾಳಿ, ಗುಡುಗಿನೊಂದಿಗೆ ತಾಲೂಕಿನ ಕೆಲ ಪ್ರದೇಶಗಳಲ್ಲಿ ಮಳೆಯಾಗಿದೆ. ಅಲ್ಲಲ್ಲಿ ಮರಗಳು ಉರುಳಿಬಿದ್ದು ಹಾನಿ ಸಂಭವಿಸಿದೆ.