ಮದ್ರಸ ಪಬ್ಲಿಕ್ ಪರೀಕ್ಷೆ ಆರಂಭ
Update: 2017-05-06 23:52 IST
ದ.ಕ. ಜಿಲ್ಲೆಯಲ್ಲಿ 8,268 ವಿದ್ಯಾರ್ಥಿಗಳು ಪುತ್ತೂರು, ಮೇ 6: ಸಮಸ್ತ ಕೇರಳ ಇಸ್ಲಾಮ್ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿರುವ ದ.ಕ. ಜಿಲ್ಲೆಯ ಎಲ್ಲಾ ಮದ್ರಸಗಳಲ್ಲಿ 5ನೆ, 7ನೆ, 10ನೆ ಮತ್ತು 12ನೆ ತರಗತಿಯ ಮದ್ರಸ ವಿದ್ಯಾರ್ಥಿಗಳ ಪಬ್ಲಿಕ್ ಪರೀಕ್ಷೆ ಶನಿವಾರ ಆರಂಭಗೊಂಡಿದೆ.
ಎರಡು ದಿನಗಳಲ್ಲಿ ಜಿಲ್ಲೆಯ ಒಟ್ಟು 8,268 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದಕ್ಕಾಗಿ ಜಿಲ್ಲೆಯನ್ನು ಮಂಗಳೂರು, ಮಿತ್ತಬೈಲು, ಕಲ್ಲಡ್ಕ, ಪುತ್ತೂರು ಮತ್ತು ಉಪ್ಪಿನಂಗಡಿ ಎಂಬ ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಜಿಲ್ಲೆಯ ಒಟ್ಟು 400 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಜೂನ್ 15ರಂದು ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ಪರೀಕ್ಷಾ ಅಧೀಕ್ಷಕ ಉಮರ್ ದಾರಿಮಿ ಸಾಲ್ಮರ ಪ್ರಕಟನೆಯಲ್ಲಿ ತಿಳಿಸಿದ್ದಾರೆ.