×
Ad

ಅಮೆರಿಕ ತಲುಪಿದ ಶ್ರೀ ಕೃಷ್ಣ ವಿಗ್ರಹ

Update: 2017-05-06 23:56 IST

ಉಡುಪಿ, ಮೇ 6: ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಅಮೆರಿಕ ನ್ಯೂಜೆರ್ಸಿಯ ಎಡಿಸನ್‌ನಲ್ಲಿರುವ ಪುತ್ತಿಗೆ ಶಾಖಾ ಮಠದ ಶ್ರೀ ಕೃಷ್ಣ ವೃಂದಾವನದಲ್ಲಿ ಸ್ಥಾಪಿಸಲಾಗುವ ಸಾಲಿಗ್ರಾಮ ಶಿಲೆಯಿಂದ ನಿರ್ಮಿಸಲಾದ ಶ್ರೀಕೃಷ್ಣ ಪ್ರತಿಮೆ ಇದೀಗ ಅಮೆರಿಕವನ್ನು ತಲುಪಿದೆ. ಕಳೆದ ಬುಧವಾರ ವಿಗ್ರಹವನ್ನು ಅಮೆರಿಕಕ್ಕೆ ಕಳುಹಿಸಿಕೊಟ್ಟಿದ್ದರು.

 ಮೇ 8ರಂದು ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಉಪಸ್ಥಿತಿಯಲ್ಲಿ ನ್ಯೂಜೆರ್ಸಿ ಶ್ರೀಕೃಷ್ಣ ವೃಂದಾವನದಲ್ಲಿ ಸಾಲಿಗ್ರಾಮ ಶಿಲೆಯ ಶ್ರೀಕೃಷ್ಣ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ ಎಂದು ಪುತ್ತಿಗೆ ಮಠದ ದಿವಾನರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News