×
Ad

‘ಸ್ಲೇಟ್’ ಎಸ್‌ಬಿಎಸ್ ವಿದ್ಯಾರ್ಥಿ ಸಮ್ಮೇಳನ

Update: 2017-05-06 23:59 IST

ಸುಳ್ಯ, ಮೇ 6: ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ಇದರ ವತಿಯಿಂದ ‘ಸ್ಲೇಟ್’ ಎಸ್‌ಬಿಎಸ್ ವಿದ್ಯಾರ್ಥಿ ಸಮ್ಮೇಳನವು ಮೇ 8ರಂದು ಸಿರಾಜುಲ್ ಹುದಾ ಮದ್ರಸ ವಠಾರ ಪಳ್ಳಿಮಜಲು, ಬೆಳ್ಳಾರೆಯಲ್ಲಿ ನಡೆಯಲಿದೆ

  ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ದ.ಕ. ಜಿಲ್ಲಾ ಉಪಾಧ್ಯಕ್ಷ ಕೆ.ಎಂ.ಎಚ್.ಝುಹುರಿ ಕೊಂಬಾಳಿ ಉದ್ಘಾಟಿಸಲಿದ್ದಾರೆ. ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ಅಧ್ಯಕ್ಷ ಟಿ.ಎಂ. ಅಬ್ದುರ್ರಹ್ಮಾನ್ ಸಖಾಫಿ ತಂಬಿನಮಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಎಸ್‌ವೈಎಸ್ ಬೆಳ್ಳಾರೆ ಸೆಂಟರ್ ಅಧ್ಯಕ್ಷ ಹಾಜಿ ಹಸನ್ ಸಖಾಫಿ ದುಆಶೀರ್ವಚನ ನೀಡಲಿದ್ದಾರೆ.

   ಎಸ್ಸೆಸ್ಸೆಫ್ ಕಾಸರಗೋಡು ಜಿಲ್ಲಾ ವಿಝ್‌ಡಂ ಕನ್ವೀನರ್ ಅಬ್ದುಸ್ಸಲಾಂ ಸಖಾಫಿ ಪಾಟ್ಲಡ್ಕ, ಎಸ್ಸೆಸ್ಸೆಫ್ ಸುಳ್ಯ ಡಿವಿಷನ್ ಅಧ್ಯಕ್ಷ ಅಬ್ದುಲ್ಲತೀಫ್ ಸಖಾಫಿ ಗೂನಡ್ಕ ತರಗತಿ ನಡೆಸಲಿದ್ದಾರೆ ಎಂದು ಎಸ್ಸೆಸ್ಸೆಫ್ ಬೆಳ್ಳಾರೆ ಸೆಕ್ಟರ್ ಎಸ್‌ಬಿಎಸ್ ಕನ್ವೀನರ್ ಅಬೂಬಕರ್ ಸಿದ್ದೀಕ್ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News