ಬೋಂದೆಲ್: ಸುನ್ನೀ ಆದರ್ಶ ಸಮಾವೇಶ
Update: 2017-05-07 00:21 IST
ಬೋಂದೆಲ್, ಮೇ 6: ಎಸ್ಸೆಸ್ಸೆಫ್ ಮತ್ತು ಎಸ್ ವೈಎಸ್ ಬೋಂದೆಲ್ ಶಾಖೆಯ ವತಿಯಿಂದ ಬೋಂದೆಲ್ ಜಂಕ್ಷನ್ ನಲ್ಲಿ ಸುನ್ನೀ ಆದರ್ಶ ಸಮಾವೇಶ ನಡೆಯಿತು.
ಬಶೀರ್ ಮದನಿ ಕೂಳೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸಮುದಾಯದೆಡೆಯಲ್ಲಿ ಭಿನ್ನತೆ ಉಂಟುಮಾಡುವವರ ಬಗ್ಗೆ ಮುಸ್ಲಿಮರು ಜಾಗ್ರತರಾಗಬೇಕೆಂದು ಹೇಳಿದರು.
ಇಸ್ಹಾಖ್ ಸಖಾಫಿ ನಂದಾವರ, ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಹಾಫಿಳ್ ಸುಫ್ಯಾನ್ ಸಖಾಫಿ ಮಾತನಾಡಿದರು.