ಪಕ್ಷಪಾತಕ್ಕೆ ಒಳಗಾದ ಉಕ್ರೇನ್ ಹಡಗಿನ ಸಿಬ್ಬಂದಿಗೆ ನೆರವಾದ ನವ ಮಂಗಳೂರು ಬಂದರು ಮಂಡಳಿ
Update: 2017-05-07 13:51 IST
ಮಂಗಳೂರು, ಮೇ 7: ಸಿಂಗಾಪುರದಿಂದ ಅರಬೀ ಸಮುದ್ರದ ಮೂಲಕ ಪ್ರಯಾಣಿಸುತ್ತಿದ್ದ ಉಕ್ರೇನ್ ಹಡಗಿನ ಸಿಬ್ಬಂದಿಯೋರ್ವರು ಪಕ್ಷಪಾತಕ್ಕೆ ಒಳಗಾಗಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ನವ ಮಂಗಳೂರು ಬಂದರು ಮಂಡಳಿ ಸಿಬ್ಬಂದಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉಕ್ರೇನ್ ಹಡಗಿನ ಸಿಬ್ಬಂದಿ ಸೆರಗು ನಲ್ವೇಕೊ(40) ಪಕ್ಷಪಾತಕ್ಕೆ ಒಳಗಾಗಿದ್ದು, ಬಂದರು ಅಧಿಕಾರಿಗಳನ್ನು ಹಡಗಿನ ಕ್ಯಾಪ್ಟನ್ ಇಮೇಲ್ ಮೂಲಕ ಸಂಪರ್ಕಿಸಿದ್ದರು. ತಕ್ಷಣವೇ ಕ್ರಮ ಕೈಗೊಂಡ ನವ ಮಂಗಳೂರು ಬಂದರು ಮಂಡಳಿ ಸಿಬ್ಬಂದಿ ನಲ್ವೇಕೊರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಚಿಕಿತ್ಸೆ ಬಳಿಕ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ ಎನ್ನಲಾಗಿದೆ.