ಮಂಗಳೂರು : ಹಿಟ್ ಆ್ಯಂಡ್ ರನ್ - ಬಾಲಕ ಬಲಿ
Update: 2017-05-07 14:16 IST
ಮಂಗಳೂರು, ಮೇ 7: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಮೃತಪಟ್ಟ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಕಿನ್ನಿಕಂಬಳ ನಿವಾಸಿ ಝಿಯಾನ್ (14) ಎಂದು ಗುರುತಿಸಲಾಗಿದೆ. ಈತ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಗಂಜಿಮಠದ ಗಾಂಧಿನಗರದಲ್ಲಿ ಕಾರೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದ್ದು, ಪರಿಣಾಮವಾಗಿ ಬಾಲಕ ರಸ್ತೆಬಿದ್ದು ಗಂಭೀರ ಗಾಯಗೊಂಡು ಮೃತಟ್ಟಿದ್ದಾನೆ.
ಘಟನೆಯಲ್ಲಿ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದಾನೆ.