×
Ad

ಬಿಯರ್‌ಗಾಗಿ ಮನುಷ್ಯರ 50ಸಾವಿರ ಲೀಟರ್ ಮೂತ್ರ ಬಳಕೆ !

Update: 2017-05-07 14:42 IST

ಡೆನ್ಮಾರ್ಕ್,ಮೇ 7: ಶರಾಬು ತಯಾರಿಸುವ ಕಂಪೆನಿಯೊಂದು ಹೊಸ ಬಿಯರ್ ತಯಾರಿಸಿದೆ. ಪಿಸನರ್ ಎಂಬ ಹೆಸರಿನ ಈ ಬಿಯರ್ ತಯಾರಿಕೆಗಾಗಿ ಒಂದು ಮ್ಯೂಸಿಕ್ ಫೆಸ್ಟಿವಲ್‌ನಿಂದ 50ಸಾವಿರ ಲೀಟರ್ ಮಾನವರ ಮೂತ್ರವನ್ನು ಒಟ್ಟು ಗೂಡಿಸಲಾಗಿತ್ತು.

ಶರಾಬು ಕಂಪೆನಿ ನೋರಬ್ರೊ ತಮ್ಮ ಉತ್ಪನ್ನದಲ್ಲಿ ಮನುಷ್ಯರ ಯಾವುದೇ ತ್ಯಾಜ್ಯ ಇರುವುದಿಲ್ಲ ಎಂದು ಸ್ಪಷ್ಟೀಕರಣ ನೀಡಿದೆ.

ಪಿಸನರ್‌ನಲ್ಲಿ ಬಳಸುವ ಬಾರ್ಲಿ ಉತ್ಪಾದಿಸಲು ಗೊಬ್ಬರವನ್ನಾಗಿ ಮನುಷ್ಯರ ಮೂತ್ರವನ್ನು ಬಳಸಲಾಗಿದೆ. ಸಾಮಾನ್ಯವಾಗಿ ಬಿಯರ್‌ಗೆ ಬಳಸುವ ಬಾರ್ಲಿಗೆ ಜಾನುವಾರುಗಳ ಗೊಬ್ಬರ ಅಥವಾ ಪ್ಯಾಕ್ಟರಿಯ ಕಂಪೋಸ್ಟ್‌ನ್ನು ಉಪಯೋಗಿಸಲಾಗುತ್ತದೆ. ಆದರೆ ಕಂಪೆನಿ ಮನುಷ್ಯರ ಮೂತ್ರದಿಂದ ಬಾರ್ಲಿಯನ್ನು ಬೆಳೆದಿದೆ.

ಮನುಷ್ಯರ ಮೂತ್ರವನ್ನು ಎರಡು ವರ್ಷ ಮೊದಲು ಯುರೋಪಿನ ಬಹುದೊಡ್ಡ ಮ್ಯೂಸಿಕ್ ಫೆಸ್ಟಿವಲ್ ರೋಸಕಿಲೆಯಿಂದ ಸಂಗ್ರಹಿಸಲಾಗಿತ್ತು. ನೊರೆಬ್ರೊ ಕಂಪೆನಿಯ ಸಿಇಒ ಹೆನ್ರಿಕ್ ವಾಂಗ್" ನಾವು ಬಿಯರ್ ಮಾಡಲು ನಾವು ಬಳಸುವ ಉತ್ಪನ್ನಗಳ ಮಾಹಿತಿ ನೀಡಿದಾಗ ಜನರು ಬಿಯರ್‌ಗೆ ನೇರವಾಗಿ ಮೂತ್ರ ಸೇರಿಸಲಾಗುತ್ತಿದೆ ಎಂದು ತಿಳಿದಿದ್ದರು. ಇದನ್ನು ಕೇಳಿನಾವು ನಕ್ಕೆವು" ಎಂದು ಹೇಳಿದ್ದಾರೆ.

ಡೆನ್ಮಾರ್ಕ್‌ನ ಕೃಷಿ ಮತ್ತು ಆಹಾರ ಕೌನ್ಸಿಲ್ ಮನುಷ್ಯರ ತ್ಯಾಜ್ಯವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಗೊಬ್ಬರವಾಗಿ ಬಳಸುತ್ತಿರುವುದು ಹೊಸವಿಷಯವಾಗಿದೆ ಎಂದು ಹೇಳಿದೆ. ಕಂಪೆನಿ ಸಂಗ್ರಹಿಸಿದ 50ಸಾವಿರ ಲೀಟರ್ ಮೂತ್ರದಿಂದ ಬೆಳೆದ ಬಾರ್ಲಿಯಲ್ಲಿ 60ಸಾವಿರ ಬಾಟ್ಲಿ ಬಿಯರ್ ತಯಾರಿಸಲಾಗಿದೆ. ಬೆಲ್ಜಿಯಂನ ಯುನಿವರ್ಸಿಟಿಯೊಂದರ ತಂಡ ಕಳೆದ ವರ್ಷ ಮೂತ್ರದಿಂದ ಕುಡಿಯುವ ನೀರು ಮತ್ತುತ್ಯಾಜವನ್ನು ಪ್ರತ್ಯೇಕಿಸುವ ಮೆಶಿನ್ ಕಂಡು ಹುಡುಕಿದ್ದೇವೆ ಎಂದು ಹೇಳಿಕೊಂಡಿತ್ತು.ಈ ತಂತ್ರಜ್ಞಾನವನ್ನು ವಿಕಾಸಶೀಲ ರಾಷ್ಟ್ರಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉಪಯೋಗಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News