×
Ad

ಉಳ್ಳಾಲ: ಸೈಯದ್ ಮದನಿ ಅರಬಿಕ್ ಕಾಲೇಜಿನಲ್ಲಿ ಮದನಿ ಬಿರುದು ಪ್ರದಾನ

Update: 2017-05-07 18:24 IST

ಉಳ್ಳಾಲ, ಮೇ 7: ಸೈಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಇದರ ಆಶ್ರಯದಲ್ಲಿರುವ ಸೈಯದ್ ಮದನಿ ಅರಬಿಕ್ ಕಾಲೇಜಿನ 47ನೇ ವಾರ್ಷಿಕ ಮತ್ತು 36ನೇ ಸನದುದಾನ ಮಹಾ ಸಮ್ಮೇಳನವು ಉಳ್ಳಾಲ ದರ್ಗಾ ವಠಾರದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಮಾತನಾಡಿ, ಉಳ್ಳಾಲದಲ್ಲಿ ಧಾರ್ಮಿಕ ಶಿಕ್ಷಣ ಕೇಂದ್ರಗಳು ಬೆಳೆದು ನಿಲ್ಲಲು ಇಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಸೈಯದ್ ಮದನಿ ತಂಙಳ್‌ರವರ ಪವಾಡವೇ ಕಾರಣ. ತಾಜುಲ್ ಉಲಮಾ ಮತ್ತು ಇಬ್ರಾಹೀಂ ಹಾಜಿಯವರ ಶ್ರಮ ಮತ್ತು ಸೇವೆ ಈ ಶಿಕ್ಷಣ ಕೇಂದ್ರಕ್ಕೆ ಬಹಳಷ್ಟಿದೆ. ಅದನ್ನು ಉಳಿಸಿಕೊಂಡು ಬಂದು ಈ ಶಿಕ್ಷಣ ಕೇಂದ್ರವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಕಾರ್ಯ ನಾವು ಮಾಡಬೇಕು ಎಂದರು.

ಸೈಯದ್ ಮದನಿ ಅರಬಿಕ್ ಕಾಲೇಜು ಪ್ರೊಫೆಸರ್ ಸೈಯದ್ ಚೆರುಕುಂಞಿ ತಂಙಳ್ ಪ್ರಾರ್ಥನೆ ನೆರವೇರಿಸಿದರು. ಪ್ರೊಫೆಸರ್ ಹಾಜಿ ಅಹ್ಮದ್ ಬಾವಾ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರೊಫೆಸರ್ ಅಬ್ದುಲ್ ರಶೀದ್ ಮದನಿ ಸನದುದಾನ ಭಾಷಣ ಮಾಡಿದರು. 58 ವಿದ್ಯಾರ್ಥಿಗಳಿಗೆ ಮದನಿ (ಎಂ.ಎಫ್.ಎಂ ಮೌಲವಿ ಫಾಲಿಲ್ ಮದನಿ) ಬಿರುದು ಪ್ರದಾನ ಮಾಡಲಾಯಿತು. ಈ ಸಂದರ್ದಲ್ಲಿ ಸೈಯದ್ ಮದನಿ ಅರಬಿಕ್ ಟ್ರಸ್ಟ್‌ನ ಸ್ಥಾಪಕ ಟ್ರಸ್ಟಿ ಬಾವ ಫಕೀರ್ ಸಾಬ್‌ ರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಉಳ್ಳಾಲ ಕೇಂದ್ರ ಜುಮ್ಮಾ ಮಸೀದಿ ಮಾಜಿ ಖತೀಬ್ ಅಬ್ದುಲ್ ರವೂಫ್ ಮುಸ್ಲಿಯಾರ್, ಖತೀಬ್ ಮುಹಮ್ಮದ್ ಶಮೀಮ್ ಸಖಾಫಿ, ಉಳ್ಳಾಲ ನಗರಸಭೆಯ ಅಧ್ಯಕ್ಷ ಹುಸೈನ್ ಕುಂಞಿಮೋನು, ಕೋಟೆಪುರ ಜುಮಾ ಮಸೀದಿ ಖತೀಬ್ ಹುಸೈನ್ ಇರ್ಷಾದ್ ಸಖಾಫಿ, ಮೇಲಂಗಡಿ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ, ಅಳೇಕಲ ಜುಮಾ ಮಸೀದಿಯ ಖತೀಬ್ ಅಬೂಝಿಯಾದ್ ಪಟ್ಟಾಂಬಿ, ಮುಕ್ಕಚ್ಚೇರಿ ಜುಮಾ ಮಸೀದಿ ಖತೀಬ್ ಮುಹಮ್ಮದ್ ಸ್ವಾದಿಕ್ ಸಖಾಫಿ, ಕಲ್ಲಾಪು ಜುಮಾ ಮಸೀದಿ ಖತೀಬ್ ಅಬ್ದುಲ್ ನಾಸಿರ್ ಸಅದಿ, ಒಂಭತ್ತುಕರೆ ಜುಮಾ ಮಸೀದಿ ಅಬ್ದುಲ್ ಸಮದ್ ಅಹ್ಸನಿ, ಸೈಯದ್ ಮದನಿ ದಅವಾ ಕಾಲೇಜು ಪ್ರಿನ್ಸಿಪಾಲ್ ಇಬ್ರಾಹಿಂ ಅಹ್ಸನಿ, ಹಿಪ್ಲುಲ್ ಕುರ್ ಆನ್ ಕಾಲೇಜು ಪ್ರೊಫೆಸರ್ ಅಬ್ದುಲ್ ರಹ್ಮಾನ್ ಸಖಾಫಿ, ಮುಫತ್ತಿಶ್ ಸುಲೈಮಾನ್ ಸಖಾಫಿ, ಸೈಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಉಪಾಧ್ಯಕ್ಷ ಯು.ಎಚ್. ಮುಹಮ್ಮದ್ ಹಾಜಿ, ಜತೆ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಕೋಶಾಧಿಕಾರಿ ಯು.ಪಿ. ಅಬ್ಬಾಸ್, ಉಳ್ಳಾಲ ದರ್ಗಾ ಉಪಾಧ್ಯಕ್ಷ ಯು.ಕೆ. ಮೋನು, ಬಾವ ಮಹಮ್ಮದ್, ಪ್ರ.ಕಾರ್ಯದರ್ಶಿ ಮುಹಮ್ಮದ್ ತ್ವಾಹಾ, ಕೋಶಾಧಿಕಾರಿ ಯು.ಕೆ. ಇಲ್ಯಾಸ್, ಲೆಕ್ಕಪರಿಶೋಧಕ ಯು.ಟಿ. ಇಲ್ಯಾಸ್, ಜತೆ ಕಾರ್ಯದರ್ಶಿಗಳಾದ ನೌಷಾದ್ ಅಲಿ, ಆಝಾದ್ ಇಸ್ಮಾಯಿಲ್, ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಫಾ ಅಬ್ದುಲ್ಲ, ಯು.ಕೆ. ಇಬ್ರಾಹಿಂ, ಜತೆ ಕಾರ್ಯದರ್ಶಿ ಎ.ಕೆ. ಮೊಹಿದ್ದೀನ್, ಕೋಶಾಧಿಕಾರಿ ಜೆ. ಅಬ್ದುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

ಸೈಯದ್ ಮದನಿ ಅರಬಿಕ್ ಟ್ರಸ್ಟ್ ಕಾರ್ಯದರ್ಶಿ ಹಾಜಿ ಎಂ. ಅಮೀರ್ ಸ್ವಾಗತಿಸಿದರು. ಶಿಹಾಬುದ್ದೀನ್ ಮಖ್‌ದೂಮಿ ಖ್ವಾರಿ ಕಿರಾಅತ್ ಪಠಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News