ಅಮೆರಿಕದಲ್ಲಿ ಹತ್ಯೆಗೀಡಾದವರಿಗೆ ತುರ್ತು ನೆರವು ಒದಗಿಸಲು ನಳಿನ್ ಆಗ್ರಹ
Update: 2017-05-07 20:37 IST
ಮಂಗಳೂರು, ಮೇ 7: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಬಜ್ಪೆ ಮೂಲದ ರಿಯಾನ ಮತ್ತು ಅವರ ಪತಿ ನರೇನ್ ಪ್ರಭು ಅವರನ್ನು ಹತ್ಯೆ ಮಾಡಿರುವುದು ಅತ್ಯಂತ ಹೇಯ ಕೃತ್ಯವಾಗಿದೆ. ಅಮೆರಿಕದಲ್ಲಿ ಇತ್ತೀಚೆಗೆ ಭಾರತೀಯ ಮೂಲದವರ ಹತ್ಯೆ ಹೆಚ್ಚುತ್ತಿರುವುದು ಖಂಡನಾರ್ಹವಾಗಿದ್ದು, ಭಾರತೀಯರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸಂಸದ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದ್ದಾರೆ.
ಮೃತ ರಿಯಾನ ಮತ್ತು ಅವರ ಪತಿ ನರೇನ್ ಪ್ರಭು ಅವರ ಮನೆಯವರಿಗೆ ತುರ್ತು ನೆರವಿನ ಅಗತ್ಯವಿದೆ. ಹತ್ಯೆಗೀಡಾದವರ ಮೃತದೇಹವನ್ನು ಮಂಗಳೂರಿಗೆ ತರಲು ಸೂಕ್ತ ವ್ಯವಸ್ಥೆ ಮಾಡಲು ವಿದೇಶಾಂಗ ಸಚಿವಾಲಯ ತುರ್ತು ಕ್ರಮ ಕೈಗೊಳ್ಳಬೇಕು. ಈ ಮೂಲಕ ಅವರ ಕುಟುಂಬಿಕರಿಗೆ ನೆರವಾಗಬೇಕು ಎಂದು ನಳಿನ್ ಕುಮಾರ್ ಕಟೀಲ್ ಒತ್ತಾಯಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.