×
Ad

ಒಡಿಶಾ ಸಚಿವ ಸಂಪುಟ ಪುನರ್ರಚನೆ

Update: 2017-05-07 21:04 IST

  ಭುವನೇಶ್ವರ, ಮೇ 7: ಒಡಿಶಾ ಸಚಿವ ಸಂಪುಟವನ್ನು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪುನರ್ರಚಿಸಿದ್ದು 12 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.ಇದರಲ್ಲಿ ಹತ್ತು ಮಂದಿ ಹೊಸಬರು. ಅಲ್ಲದೆ ಇಬ್ಬರು ರಾಜ್ಯಸಚಿವರಿಗೆ ಕ್ಯಾಬಿನೆಟ್ ಸಚಿವರಾಗಿ ಭಡ್ತಿ ನೀಡಲಾಗಿದೆ. ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಒಡಿಶಾ ಸರಕಾರದ ಹತ್ತು ಸಚಿವರು ಶನಿವಾರ ರಾಜೀನಾಮೆ ಸಲ್ಲಿಸಿದ್ದರು.
   ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಎಸ್.ಸಿ.ಜಮೀರ್ ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ಮತ್ತು ಹಿರಿಯ ಸಚಿವರು ಈ ಸಂದರ್ಭ ಉಪಸ್ಥಿತರಿದ್ದರು. ನೂತನ ಸಚಿವರಲ್ಲಿ ಆರು ಕ್ಯಾಬಿನೆಟ್ ದರ್ಜೆ ಸಚಿವರು ಮತ್ತು ನಾಲ್ವರು ರಾಜ್ಯಸಚಿವರಾಗಿದ್ದಾರೆ. ಹಾಲಿ ಸಚಿವರಲ್ಲಿ ಇಬ್ಬರನ್ನು ಕ್ಯಾಬಿನೆಟ್ ದರ್ಜೆಗೆ ಭಡ್ತಿಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News