ಬಿಡಾಡಿ ನಾಯಿಗಳು ಮತ್ತು ಮಂಗಗಳ ನಿಯಂತ್ರಣಕ್ಕೆ ನಿಯಮಗಳಿದ್ದರೆ ತೋರಿಸಿ:ದಿಲ್ಲಿ ಹೈಕೋರ್ಟ್

Update: 2017-05-07 16:54 GMT

 ಹೊಸದಿಲ್ಲಿ,ಮೇ 7: ಬಿಡಾಡಿ ನಾಯಿಗಳು ಮತ್ತು ಮಂಗಗಳು ನಗರದ ವಸತಿ ಮತ್ತು ಕಚೇರಿಗಳಿರುವ ಪ್ರದೇಶಗಳನ್ನು ಪ್ರವೇಶಿಸಿ ಸೃಷ್ಟಿಸುತ್ತಿರುವ ಸಮಸ್ಯೆಯನ್ನು ಎದುರಿಸಲು ನಿಯಮಾವಳಿಗಳಿದ್ದರೆ ತೋರಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ನಗರಾಡಳಿತದ ಅಧಿಕಾರಿಗಳಿಗೆ ಸೂಚಿಸಿದೆ.

ಈ ವಿಷಯದಲ್ಲಿ ವಿದೇಶಗಳಲ್ಲಿ ಅನುಸರಿಸಲಾಗುತ್ತಿರುವ ನಿಯಮಗಳ ಬಗ್ಗೆಯೂ ಮಾಹಿತಿ ನೀಡುವಂತೆ ಪ್ರಭಾರಿ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ಮತ್ತು ನ್ಯಾ.ಅನು ಮಲ್ಹೋತ್ರಾ ಅವರ ಪೀಠವು ತಿಳಿಸಿತು.

ಹಿಂದೆ ಉಚ್ಚ ನ್ಯಾಯಾಲಯದ ಆದೇಶದ ಬಳಿಕ ದಿಲ್ಲಿಯ ರಸ್ತೆಗಳಿಂದ ಬಿಡಾಡಿ ದನಗಳು ಮಾಯವಾಗಿದ್ದನ್ನು ನ್ಯಾ.ಮಿತ್ತಲ್ ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News