×
Ad

ಮುಸ್ಲಿಂ ಯುವತಿಯರಿಂದ ಲವ್ ಜಿಹಾದ್: ಕಲ್ಲಡ್ಕ ಪ್ರಭಾಕರ ಭಟ್ ಆರೋಪ

Update: 2017-05-07 23:36 IST

ಮೂಡುಬಿದಿರೆ, ಮೇ 7: ಲವ್ ಜಿಹಾದ್ ಮೂಲಕ ಹಲವು ವರ್ಷಗಳಿಂದ ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಮತಾಂತರ ಮಾಡುತ್ತಿದ್ದರು. ಈಗ ಮುಸ್ಲಿಂ ಯುವತಿಯರೇ ಲವ್ ಜಿಹಾದ್ ನಲ್ಲಿ ತೊಡಗಿಕೊಂಡಿದ್ದು, ಈ ಬಗ್ಗೆ ಸಮಾಜ ಜಾಗೃತಗೊಳ್ಳಬೇಕಿದೆ ಎಂದು ಆರೆಸ್ಸೆಸ್ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯಕಾರಿಣಿ ಸದಸ್ಯ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.

ವಿಶ್ವಹಿಂದೂ ಪರಿಷತ್ ಬಜರಂಗದಳ ಆಶ್ರಯದಲ್ಲಿ ಮೇ 14ರಂದು ಮೂಡುಬಿದಿರೆಯಲ್ಲಿ ನಡೆಯಲಿರುವ ಹಿಂದೂ ಯುವ ಸಮಾವೇಶದ ಕಚೇರಿಯನ್ನು ಪೇಟೆಯ ಕೃಷ್ಣಕಟ್ಟೆ ಬಳಿ ಉದ್ಘಾಟಿಸಿ ಅವರು ಮಾತನಾಡಿದರು.

ಹಿರಿಯ ಆರೆಸ್ಸೆಸ್ ಕಾರ್ಯಕರ್ತರಾದ ಪ್ರಭಾಕರ್ ಕಾಮತ್ ಬೋಳ, ಸುರೇಂದ್ರ ಅಮೀನ್, ಬಜರಂಗದಳ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್, ವಿಹಿಂಪ ಮೂಡುಬಿದಿರೆ ಪ್ರಖಂಡದ ಅಧ್ಯಕ್ಷ ವಿಶ್ವನಾಥ್ ಪ್ರಭು, ಹಿಂದೂ ಯುವ ಸಮಾವೇಶ ಸಮಿತಿಯ ಅಧ್ಯಕ್ಷ ಯುವರಾಜ್ ಜೈನ್, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ಕೆ.ಪಿ ಸುಚರಿತ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ್ ಅಧಿಕಾರಿ, ಬಿಜೆಪಿ ಮೂಡುಬಿದಿರೆ ಮಂಡಲ ಅಧ್ಯಕ್ಷ ಈಶ್ವರ ಕಟೀಲು, ಪ್ರಧಾನ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮೂಡುಬಿದಿರೆ ಪುರಸಬಾ ಸದಸ್ಯರಾದ ಬಾಹುಬಲಿ ಪ್ರಸಾದ್, ನಾಗರಾಜ್ ಪೂಜಾರಿ, ಲಕ್ಷಣ್ ಪೂಜಾರಿ, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ದೇವಿ ಪ್ರಸಾದ್ ಶೆಟ್ಟಿ, ಬಜರಂಗದಳ ತಾಲೂಕು ಸೋಮನಾಥ ಕೋಟ್ಯಾನ್, ಬಜರಂಗದಳ ಪ್ರಮುಖರಾದ ಸಂತೋಷ್, ಭರತ್ ಕುಮಾರ್ ಶೆಟ್ಟಿ, ಬಿಜೆಪಿ ಹಿಂದುಳಿದ ಮೋರ್ಚಾದ ಮಂಡಲ ಅಧ್ಯಕ್ಷ ಗೋಪಾಲ ಶೆಟ್ಟಿಗಾರ್, ಬಿಜೆಪಿ ನಾಯಕಿ ಲೀಲಾ ಬಂಜನ್, ಮೇಘನಾತ್ ಶೆಟ್ಟಿ, ಸುನೀಲ್ ಪಣಪಿಲ ಉಪಸ್ಥಿತರಿದ್ದರು.

ಹಿಂದೂ ಸಮಾವೇಶ ಸಂಚಾಲಕ ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ವಿಹಿಂಪ ಮೂಡುಬಿದಿರೆ ಕಾರ್ಯಾಧ್ಯಕ್ಷ ಶ್ಯಾವ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News