ಎಸಿಪಿ ವೆಲೆಟೈಂನ್ ಡಿಸೋಜ, ಜೆಪ್ಪು ನವಾಝ್‌ರಿಗೆ ಸನ್ಮಾನ
Update: 2017-05-08 16:00 IST
ಮಂಗಳೂರು, ಮೇ 8: ಎಸಿಪಿ ವೆಲೆಟೈಂನ್ ಡಿಸೋಜ ಹಾಗೂ ಆಶ್ರಯ ಸಮಿತಿ ಸದಸ್ಯರಾದ ಮಹಮ್ಮದ್ ನವಾಝ್ ಜೆಪ್ಪುಅವರನ್ನು ಸರಕಾರಿ ಮುಖ್ಯ ಸಚೇತಕ ಐವನ್ ಡಿಸೋಜರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಐವನ್ ಅವರ ಕಚೇರಿಯಲ್ಲಿ ನಡೆದ ಈ ಸರಳ ಕಾರ್ಯಕ್ರಮದಲ್ಲಿ ಕರಾವಳಿ ಪ್ರಾಧಿಕಾರದ ಸದಸ್ಯ ನಾಗೇಂದ್ರ ಕುಮಾರ್, ಮಾಜಿ ಮೇಯರ್ ಕೆ.ಅಶ್ರಫ್, ಉಪಮೇಯರ್ ರಜನೀಶ್, ಕಾರ್ಪೊರೇಟರ್ ಆಶಾ ಡಿಸಿಲ್ವ, ಜೆಸಿಂತಾ ವಿಜಯ ಆಲ್ಫ್ರೆಡ್, ಲತೀಫ್ ಕಂದಕ್, ಡಿ.ಕೆ.ಅಶೋಕ್, ಮೆಸ್ಕಾಂ ನಿರ್ದೇಶಕರಾದ ಸುರೇಂದ್ರ ಕಾಂಬ್ಳಿ, ಅಹ್ಮದ್ ಬೋಳಾರ, ಮನೀಶ್, ಆನಂದ್ ಸೋನ್ಸ್, ನೀಲಯ್ಯ ಕರ್ಕೆರ, ಎರ್ಮಾಲ್ ಮುಹಮ್ಮದ್ ಹನೀಫ್, ನಾರಾಯಣ ಕೋಟ್ಯಾನ್, ಎನ್.ಪಿ.ಮನು, ಹಸನಬ್ಬ ಮುಂತಾದವರು ಉಪಸ್ಥಿತರಿದ್ದರು.