ನನ್ನ ಪತ್ನಿಯನ್ನು ಭಾರತ ದೂತಾವಾಸ ಕೈದಿಯಾಗಿರಿಸಿದೆ: ಪಾಕ್‌ಪ್ರಜೆ ದೂರು
ಇಸ್ಲಾಮಾಬಾದ್,ಮೇ 8: ಭಾರತೀಯಳಾದ ತನ್ನ ನವವಧುವನ್ನು ಪಾಕಿಸ್ತಾನದಲ್ಲಿರುವ ಭಾರತದ ದೂತಾವಾಸ ಬಂಧಿಸಿಟ್ಟಿದೆ ಎಂದು ಪಾಕ್ ಪ್ರಜೆಯೊಬ್ಬ ಹೇಳಿದ್ದಾರೆ. ದಿಲ್ಲಿಯ ಉಝ್ಮ ಮತ್ತು ಪಾಕಿಸ್ತಾನದ ತಾಹಿರ್‌ಮಲೇಶ್ಯದಲ್ಲಿ ಪರಿಚಿತರಾಗಿದ್ದರು. ವಾಘಾ ಗಡಿಯ ಮೂಲಕ ಈತಿಂಗಳು ಮೇ ಒಂದಕ್ಕೆ ಉಝ್ಮೆ ಪಾಕಿಸ್ತಾನಕ್ಕೆ ತೆರಳಿದ್ದರು.
ಮೇ ಮೂರರಂದು ಅವರಿಬ್ಬರ ಮದುವೆ ನಡೆಯಿತು. ನಂತರ ಇಬ್ಬರೂ ತಾಹಿರ್‌ಗೆ ವೀಸಾಕ್ಕಾಗಿ ಭಾರತದ ದೂತಾವಾಸಕ್ಕೆ ತೆರಳಿ ಅರ್ಜಿ ಸಲ್ಲಿಸಿದ್ದರು.
ಫೋನ್ ನಂಬರ್ ಕೂಡಾ ನೀಡಿ ದೂತಾವಾಸದಿಂದ ಹೊರಗೆ ಬಂದಿದ್ದರು. ಅಷ್ಟರಲ್ಲಿ ಭಾರತೀಯ ದೂತಾವಾಸದಿಂದ ಫೋನ್ ಕರೆಬಂದ ಹಿನ್ನೆಲೆಯಲ್ಲಿ ಉಝ್ಮೆ ಧೂತವಾಸದ ಕಟ್ಟಡದೊಳಕ್ಕೆ ಮರಳಿ ಹೋಗಿದ್ದಾಳೆ. ಆನಂತರ ತನ್ನ ಪತ್ನಿ ಅಲ್ಲಿಂದ ಹಿಂದಿರುಗಿ ಬಂದಿಲ್ಲ. ತಾನು ಕಟ್ಟಡದಹೊರಗೆ ಕೆಲವು ಗಂಟೆಗಳ ಕಾಲ ಪತ್ನಿಗಾಗಿ ಕಾದಿದ್ದೇನೆ, ಎಂದು ತಾಹಿರ್ ಹೇಳುತ್ತಿದ್ದಾರೆ.
ಪತ್ನಿಯ ಕುರಿತು ದೂತಾವಾಸದ ಅಧಿಕಾರಿಗಳಲ್ಲಿ ಕೇಳಿದಾಗ, ಅವರು ಅಲ್ಲಿಲ್ಲ ಎಂದು ಉತ್ತರಿಸಿದ್ದಾರೆ. ದೂತಾವಾಸದ ಅಧಿಕಾರಿಗಳು ತಮ್ಮ ಮೂರು ಮೊಬೈಲ್ ಫೋನ್‌ಗಳನ್ನು ವಾಪಸು ನೀಡಿಲ್ಲ. ಪೊಲೀಸ್ ಠಾಣೆಗೆ ಹಾಗೂ ಸೆಕ್ರಟರಿಯೇಟ್‌ಗೆ ದೂರು ನೀಡಿದ್ದೇನೆ ಎಂದು ತಾಹಿರ್ ಹೇಳಿದ್ದಾರೆ. ಸ್ವಂತ ಇಚ್ಛೆಯಿಂದ ಉಝ್ಮೆ ಅಲ್ಲಿ ನಿಂತಿದ್ದಾರೆ. ಮರುದಿವಸ ಬಂದರೆ ಪತ್ನಿಯನ್ನು ಭೇಟಿಯಾಗಬಹುದು, ವೀಸಾವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು ಎಂದುತಾಹಿರ್ ಹೇಳುತ್ತಿದ್ದಾರೆ.
ಇದೇ ವೇಳೆ ಪಿಟಿಐ ಸುದ್ದಿಸಂಸ್ಥೆ ಸ್ಪಷ್ಟೀಕರಣ ಕೇಳಿದಾಗ ದಿಲ್ಲಿಯ ವಿದೇಶ ಸಚಿವಾಲಯ ವಕ್ತಾರರಲ್ಲಿ ಮಾತಾಡಬೇಕೆಂದು ದೂತಾವಾಸ ಅಧಿಕಾರಿಗಳು ತಿಳಿಸಿದ್ದಾರೆ. ಈ ನಡುವೆ ಜಿಯೊ ನ್ಯೂಸ್ ಈ ವಿಷಯವನ್ನು ಪಾಕಿಸ್ತಾನದ ರಾಜತಾಂತ್ರಿಕ ಮಟ್ಟದಲ್ಲಿ ಬಗೆಹರಿಸಲು ಪ್ರಯತ್ನಿಸಲಾಗುತ್ತದೆ ಎಂದು ವರದಿ ಮಾಡಿದೆ.