ಬಿಜೆಪಿ ಮುಖಂಡನ ಮೇಲೆ ಆರೆಸೆಸ್ಸಿಗರ ಹಲ್ಲೆ
Update: 2017-05-08 20:28 IST
ಕೊಚ್ಚಿ, ಮೇ 8: ಕೇರಳದ ಬಿಜೆಪಿ ಮುಖಂಡರೋರ್ವರ ಮನೆಗೆ ನುಗ್ಗಿದ ಆರೆಸ್ಸೆಸ್ ಕಾರ್ಯಕರ್ತರ ತಂಡವೊಂದು ಅವರ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಸಮಿತಿ ಸದಸ್ಯ ವೆನ್ನಾಲ ಸಂಜೀವನ್ ಮನೆಗೆ ನುಗ್ಗಿದ ಆರೆಸ್ಸೆಸ್ ಕಾರ್ಯಕರ್ತರ ತಂಡವೊಂದು ಹರಿತವಾದ ಆಯುಧಗಳಿಂದ ಅವರ ಮೇಲೆ ದಾಳಿ ನಡೆಸಿದೆ. ಎಡಗಾಲಿಗೆ ತೀವ್ರ ಸ್ವರೂಪದ ಗಾಯದೊಂದಿಗೆ ಸಂಜೀವನ್‌ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸ್ಥಳೀಯ ಆರೆಸ್ಸೆಸ್ ಕಾರ್ಯಕರ್ತರು ಒಳಗೊಂಡಿದ್ದಾರೆ ಎಂದು ಗಾಯಾಳು ತಿಳಿಸಿದ ಹಿನ್ನೆಲೆಯಲ್ಲಿ ನಾಲ್ವರು ಆರೆಸ್ಸೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಸಂಜೀವನ್ ಮತ್ತು ಆರೆಸ್ಸೆಸ್ ಕಾರ್ಯಕರ್ತರ ನಡುವಿನ ವೈಯಕ್ತಿಕ ದ್ವೇಷ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.