ಖುರೇಶಿ ಪ್ರಕರಣ: ಮಾನವ ಹಕ್ಕು ಆಯೋಗದಿಂದ ವಿಚಾರಣೆ
Update: 2017-05-08 21:35 IST
ಮಂಗಳೂರು, ಮೇ 8: ಖುರೇಶಿ ಪ್ರಕರಣಕ್ಕೆ ಸಂಬಂಧಿಸಿ ಅವರ ಸಹೋದರ ನಿಶಾದ್ ಅವರನ್ನು ಮಾನವ ಹಕ್ಕು ಆಯೋಗವು ಸೋಮವಾರ ವಿಚಾರಣೆ ನಡೆಸಿದೆ. ನಿಶಾದ್ ಮೇ 2ರಂದೇ ಬೆಂಗಳೂರಿನಲ್ಲಿ ಮಾನವ ಹಕ್ಕು ಆಯೋಗದ ವಿಚಾರಣೆಗೆ ಹಾಜರಾಗಬೇಕಾಗಿತ್ತು. ಆದರೆ, ಅವರಿಗೆ ಸಕಾಲದಿಂದ ನೋಟಿಸ್ ಕೈಗೆ ಸಿಗದಿದ್ದುದರಿಂದ ಸೋಮವಾರ ಬೆಂಗಳೂರಿಗೆ ತೆರಳಿ ವಿಚಾರಣೆಗೆ ಹಾಜರಾಗಿದ್ದಾರೆ.
ಖುರೇಶಿ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿ ವಿಚಾರಣೆ ನಡೆದಿದೆ ಎನ್ನಲಾಗಿದೆ.