ತಂಡದಿಂದ ಇಬ್ಬರಿಗೆ ಹಲ್ಲೆ
Update: 2017-05-08 22:55 IST
ಮಂಗಳೂರು, ಮೇ 8: ರಸ್ತೆ ಮಧ್ಯೆ ಮದ್ಯಸೇವನೆ ಮಾಡಿ ನೃತ್ಯ ಮಾಡುತ್ತಿದ್ದ ಆರು ಮಂದಿಯ ತಂಡವೊಂದು ಇಬ್ಬರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಎದುರುಪದವು ಜಂಕ್ಷನ್‌ನಲ್ಲಿ ನಡೆದಿದೆ.
ಎದುರುಪದವು ಜಂಕ್ಷನ್‌ನಲ್ಲಿ ಕುಡಿದು ನೃತ್ಯ ಮಾಡುತ್ತಿದ್ದ ಆರು ಮಂದಿಯ ತಂಡವು ಅದೇ ದಾರಿಯಾಗಿ ಹೋಗುತ್ತಿದ್ದ ಹೆನ್ರಿ ಹಾಗೂ ರಂಜಿತ್ ಆಚಾರ್ಯ ಎಂಬವರನ್ನು ತಡೆದು ಅವರನ್ನು ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ ಸ್ವಲ್ಪ ಹೊತ್ತಿನಲ್ಲೇ ಮತ್ತೆ ಈ ತಂಡದ ಕೆಲವರು ದ್ವಿಚಕ್ರ ವಾಹನದಲ್ಲಿ ಹೆನ್ರಿ ಹಾಗೂ ರಂಜಿತ್‌ನ್ನು ಹಿಂಬಾಲಿಸಿ ಹೋಗಿ ಹಲ್ಲೆ ನಡೆಸಿ ಚಿನ್ನದ ಸರವನ್ನು ಕಸಿದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.