ಮನೆಗೆ ನುಗ್ಗಿ ಮಹಿಳೆಯರು ಸೇರಿದಂತೆ ಮೂವರಿಗೆ ಹಲ್ಲೆ: ದೂರು
Update: 2017-05-08 22:57 IST
ಮಂಗಳೂರು, ಮೇ 8: ವ್ಯಕ್ತಿಯೊಬ್ಬರು ಮನೆಯ ಕಾಂಪೌಂಡ್‌ಗೆ ಅಕ್ರಮ ಪ್ರವೇಶಗೈದು ಮೂವರ ಮೇಲೆ ಹಲ್ಲೆ ನಡೆಸಿದ ಘಟನೆ ಬಿಕರ್ನಕಟ್ಟೆಯಲ್ಲಿ ನಡೆದಿದೆ.
ಬಿಕರ್ನಕಟ್ಟೆ ಚೌಟರ ಕಾಂಪೌಂಡ್ ನಿವಾಸಿ ರೇಖಾ (24), ಅವರ ಅಕ್ಕ ಸುಜಾತಾ ಮತ್ತು ಮಾವ ಭಾಸ್ಕರ ಎಂಬವರು ಹಲ್ಲೆಗೊಳಗಾದವರು. ಬಂಟ್ವಾಳ ಬಿಲ್ಲಾಡಿ ನಿವಾಸಿ ಅಶೋಕ್ ಕುಮಾರ್ (24) ಹಲ್ಲೆ ನಡೆಸಿದಾತ ಎನ್ನಲಾಗಿದೆ.
ರವಿವಾರ ರಾತ್ರಿ ಮನೆಯ ಕಾಂಪೌಂಡ್‌ಗೆ ಅಕ್ರಮ ಪ್ರವೇಶ ಮಾಡಿದ ಅಶೋಕ್ ಮೂವರ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ದೂಡಿ ಹಾಕಿದ್ದಾನೆ ಎಂದು ರೇಖಾ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.