×
Ad

ವಿಜಯಪುರ ಸೇನಾ ನೇಮಕಾತಿ ರ್ಯಾಲಿ:ಅಭ್ಯರ್ಥಿಗಳಿಗೆ ವಿಶೇಷ ಬಸ್ ಸೌಲಭ್ಯ

Update: 2017-05-09 20:15 IST

ಉಡುಪಿ, ಮೇ 9: ಮೇ 12ರಿಂದ 18ರವರೆಗೆ ವಿಜಯಪುರದಲ್ಲಿ ನಡೆಯ ಲಿರುವ ಸೇನಾ ನೇಮಕಾತಿ ರ್ಯಾಲಿಯಲ್ಲಿ ಉಡುಪಿ ಜಿಲ್ಲೆಯಿಂದ ಭಾಗವಹಿ ಸಲಿರುವ ಅ್ಯರ್ಥಿಗಳಿಗೆ ವಿಜಯಪುರ ಪ್ರಯಾಣಕ್ಕಾಗಿ ಕೆಎಸ್ಸಾರ್ಟಿಸಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.

ಈ ವಿಶೇಷ ಬಸ್ ಮೇ 14ರ ಬೆಳಗ್ಗೆ 6 ಗಂಟೆಗೆ ಉಡುಪಿಯಿಂದ ಹೊರಡಲಿದೆ. ಆನ್‌ಲೈನ್ ಮೂಲಕ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಹೆಸರು ನೊಂದಾಯಿಸಿಕೊಂಡ ಉಡುಪಿ ಜಿಲ್ಲೆಯ ಅ್ಯರ್ಥಿ ಗಳು ಮೇ 13ರ ಸಂಜೆಯೊಳಗೆ ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಈ ಬಸ್ ಮೇ 14ರಂದು ವಿಜಯಪುರದಲ್ಲಿ ತಂಗಲಿದ್ದು ಅ್ಯರ್ಥಿಗಳು ಮೇ 15ರಂದು ಅದೇ ಬಸ್ಸಿನಲ್ಲಿ ಮರುಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.ನೊಂದಾಯಿತ ಅ್ಯರ್ಥಿಗಳು ಈ ವಿಶೇಷ ಸೌಲಭ್ಯದ ಪ್ರಯೋಜನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News