ಸಿಂಧುತ್ವ ವಿಮಾ ಪತ್ರ ಕಡ್ಡಾಯ: ಆರ್‌ಟಿಓ
Update: 2017-05-09 20:16 IST
ಉಡುಪಿ, ಮೇ 9: ಸರ್ವೋಚ್ಛ ನ್ಯಾಯಾಲಯದ ಸೂಚನೆಯಂತೆ ರಚಿಸಲ್ಪಟ್ಟ ಸುರಕ್ಷತಾ ಸಮಿತಿಯ ನಿರ್ದೇಶನದಂತೆ ರಸ್ತೆಯ ಮೇಲೆ ಚಲಿಸುವ ಎಲ್ಲಾ ಮಾದರಿಯ ಮೋಟಾರು ವಾಹನಗಳು ಕನಿಷ್ಟ ಮೂರನೇ ಪಾರ್ಟಿ ವಾಹನದ ವಿಮಾ ಪಾಲಿಸಿಯನ್ನು ಹೊಂದಿರಬೇಕು ಎಂದು ಆರ್‌ಟಿಓ ಪ್ರಕಟಣೆಯಲ್ಲಿ ತಿಳಿಸಿದೆ.
ವಾಹನದ ವಿಮಾ ಪಾಲಿಸಿಯನ್ನು ಹೊಂದಿರದ ವಾಹನಗಳನ್ನು ಜಪ್ತಿ ಮಾಡಲಾಗುವುದು. ಜಪ್ತಿ ಮಾಡಿದ ವಾಹನದ ವಿಮಾ ಪಾಲಿಸಿಯನ್ನು ಹಾಜರುಪಡಿಸಿದ ನಂತರವೇ ವಾಹನವನ್ನು ಬಿಡುಗಡೆಗೊಳಿಸಲಾಗುವುದು. ಆದ್ದರಿಂದ ವಾಹನ ಮಾಲಕರು ವಾಹನದ ಸಿಂಧುತ್ವವಿರುವ ವಿಮಾಪತ್ರವನ್ನು ಇಟ್ಟುಕೊಂಡು ಪ್ರವರ್ತನ ಸಿಬ್ಬಂದಿ ಕೇಳಿದಾಗ ಹಾಜರುಪಡಿಸುವಂತೆ ಉಪ ಸಾರಿಗೆ ಆಯುಕ್ತರುಹಾಗೂ ಹಿರಿಯ ಪ್ರಾದೇಶಿಕ ಅಧಿಕಾರಿಗಳು ಎಚ್ಚರಿಸಿದ್ದಾರೆ.